ಧಾರವಾಡ: ಧಾರವಾಡ ಜನತೆಗೆ ಸಂತಸದ ಸುದ್ದಿ. ಪ್ರಸಿದ್ಧ ಮುರುಡಿ ಸಾರಿಯ ಎಕ್ಸ್‌ಪೋ ಇದೀಗ ಧಾರವಾಡದಲ್ಲೇ ಆರಂಭವಾಗಿದ್ದು, ಸೀರೆ ಪ್ರಿಯರಿಗೆ ವಿಶೇಷ ಅವಕಾಶ ಕಲ್ಪಿಸಿದೆ.
ನಗರದ ಶಿವಾಜಿ ಸರ್ಕಲ್ ಸಮೀಪದ ಮಲ್ಲಸಜ್ಜನ ವ್ಯಾಯಾಮಶಾಲೆಯಲ್ಲಿ ಈ ಎಕ್ಸ್‌ಪೋ ನಡೆಯುತ್ತಿದೆ. ಇದುವರೆಗೆ ಹುಬ್ಬಳ್ಳಿ-ಧಾರವಾಡ ಭಾಗದ ಜನರು ಬೆಳಗಾವಿಗೆ ತೆರಳಿ ಸೀರೆ ಖರೀದಿಸಬೇಕಾಗಿತ್ತು. ಆದರೆ ಈಗ ಸ್ಥಳೀಯರಿಗೇ ಸುಲಭವಾಗಿ ನೇಕಾರರ ದರದಲ್ಲೇ ಸೀರೆಗಳನ್ನು ಖರೀದಿಸುವ ಅವಕಾಶ ದೊರಕಿದೆ.
ಖ್ಯಾತ ಹಿರಿಯ ನಟಿ ಉಮಾಶ್ರೀ ಅವರು ಎಕ್ಸ್‌ಪೋವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನೇಕಾರರನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುರುಡಿ ಸಾರಿ ಸಂಸ್ಥೆಯ ಮಾಲೀಕರಾದ ಶಿವರಾಜ ಮುರುಡಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು, ಎಕ್ಸ್‌ಪೋಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/05/2026 03:46 pm
LOADING...