ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮರು ಎಣಿಕೆಯಲ್ಲಿ ರಾಜೇಗೌಡರಿಗೆ ಶಾಕ್: ಅಸಿಂಧುಗೊಂಡವು 318 ಅಂಚೆ ಮತಗಳು!

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯು ಹೈಕೋರ್ಟ್ ನಿರ್ದೇಶನದಂತೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಪ್ರಕ್ರಿಯೆಯ ನಂತರ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಸ್ಟ್ರಾಂಗ್ ರೂಂನಲ್ಲಿ ಮತ ಪತ್ರಗಳನ್ನು ಸೀಲ್ ಮಾಡಿದ ಬಳಿಕ ಮಾತನಾಡಿದ ಅವರು, ಈ ಬಾರಿ ಕೇವಲ 1,822 ಅಂಚೆ ಮತಗಳನ್ನು ಮಾತ್ರ ಮರು ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮರು ಎಣಿಕೆಯಲ್ಲಿ ಮತಗಳ ಸಂಖ್ಯೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. 2023ರ ಮೂಲ ಎಣಿಕೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು 692 ಮತಗಳನ್ನು ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರು 569 ಮತಗಳನ್ನು ಪಡೆದಿದ್ದರು. ಆದರೆ ಪ್ರಸ್ತುತ ಮರು ಎಣಿಕೆಯಲ್ಲಿ ಜೀವರಾಜ್ ಅವರು 690 ಮತಗಳನ್ನು ಪಡೆದಿದ್ದು, ಅವರ ಎರಡು ಮತಗಳು ಕಡಿಮೆಯಾಗಿವೆ. ಮತ್ತೊಂದೆಡೆ ರಾಜೇಗೌಡ ಅವರ ಮತಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಅವರು ಕೇವಲ 314 ಮತಗಳನ್ನು ಪಡೆದಿದ್ದಾರೆ. ಅಂದರೆ ಅವರ ಹಿಂದಿನ ಮತಗಳಿಗಿಂತ 251 ಮತಗಳು ಕಡಿಮೆಯಾಗಿವೆ. ರಾಜೇಗೌಡ ಅವರಿಗೆ ಈ ಹಿಂದೆ ಲಭಿಸಿದ್ದ ಮತಗಳಲ್ಲಿ 318 ಮತಗಳನ್ನು ಈ ಬಾರಿ ಅಸಿಂಧು ಎಂದು ಘೋಷಿಸಿರುವುದು ಈ ದೊಡ್ಡ ಮಟ್ಟದ ವ್ಯತ್ಯಾಸಕ್ಕೆ ಕಾರಣವಾಗಿದೆ. 2023ರ ಅಂಕಿಅಂಶಗಳ ಪ್ರಕಾರ ಒಟ್ಟು 1,822 ಅಂಚೆ ಮತಗಳಲ್ಲಿ 1,543 ಸಿಂಧು ಮತ್ತು 279 ಮತಗಳು ತಿರಸ್ಕೃತಗೊಂಡಿದ್ದವು. ಇದೀಗ ಮರು ಎಣಿಕೆಯ ಸಂಪೂರ್ಣ ವರದಿಯನ್ನು ಚುನಾವಣಾ ಆಯೋಗ ಮತ್ತು ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದು, ಮತ ಟ್ಯಾಂಪರಿಂಗ್ ಕುರಿತ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ತಮಗೆ ಅಧಿಕಾರವಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Edited By :
PublicNext

PublicNext

03/05/2026 09:19 am

Cinque Terre

10.85 K

Cinque Terre

0

ಸಂಬಂಧಿತ ಸುದ್ದಿ