ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕೇರಳ ಕೈ ಗೆಲುವಿನ ಹಿಂದೆ ‘ಸಂದೀಪ್’ ಸೂತ್ರ - ಕಾಫಿನಾಡಿನ ಯುವ ನಾಯಕನ ಚಾಣಾಕ್ಷ ನಡೆಗೆ ಎಐಸಿಸಿ ಫಿದಾ!

ಚಿಕ್ಕಮಗಳೂರು: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಸಾಧಿಸಿರುವ ಸಂಭ್ರಮದಲ್ಲಿದೆ. ಈ ವಿಜಯದ ಹಿಂದೆ ಕರ್ನಾಟಕದ ಕಾಫಿನಾಡಿನ ಯುವ ನಾಯಕ ಸಂದೀಪ್ ಅವರ ಚಾಣಾಕ್ಷ ನಡೆಗಳು ಪ್ರಮುಖ ಪಾತ್ರ ವಹಿಸಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಚುನಾವಣಾ ಫಲಿತಾಂಶದ ನಂತರ ಸಂದೀಪ್ ಅವರನ್ನು ಅಪ್ಪಿಕೊಂಡು ಅಭಿನಂದಿಸುವ ಮೂಲಕ ಯುವ ನಾಯಕನ ಸಂಘಟನಾ ಶಕ್ತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಕೇರಳದ ರಾಜಕೀಯ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದ ಸಂದೀಪ್, ಸ್ಥಳೀಯ ಸಮಸ್ಯೆಗಳು ಮತ್ತು ಮತದಾರರ ನಾಡಿಮಿಡಿತವನ್ನು ಅರಿತು ರೂಪಿಸಿದ ಕಾರ್ಯತಂತ್ರಗಳು ಪಕ್ಷಕ್ಕೆ ವರದಾನವಾಗಿವೆ. ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ಪ್ರಚಾರ ಸಭೆಗಳನ್ನು ಸಂಘಟಿಸಿದ ಇವರ ಶ್ರಮಕ್ಕೆ ಈಗ ದೊಡ್ಡ ಮಟ್ಟದ ಮನ್ನಣೆ ಸಿಕ್ಕಿದೆ.

ಮತ್ತೊಂದೆಡೆ, ಕುನ್ನತನಾಡ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ 20 ದಿನಗಳ ಕಾರ್ಯ ನಿರ್ವಹಿಸಿದ್ದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ಶ್ರಮವೂ ಫಲ ನೀಡಿದೆ. ಇವರ ನೇತೃತ್ವದಲ್ಲಿ ನಡೆದ ಚುರುಕಿನ ಪ್ರಚಾರದಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ವಿ.ಪಿ. ಸಜೀಂದ್ರನ್ ಅವರು 20 ಸಾವಿರಕ್ಕೂ ಅಧಿಕ ಮತಗಳ ಭರ್ಜರಿ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಒಟ್ಟಾರೆಯಾಗಿ, ಕೇರಳದ ಮಣ್ಣಿನಲ್ಲಿ ಚಿಕ್ಕಮಗಳೂರಿನ ನಾಯಕರು ತೋರಿದ ಸಂಘಟನಾ ಚಾತುರ್ಯ ಈಗ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರ ಗಮನ ಸೆಳೆದಿದೆ.

Edited By : Nagaraj Tulugeri
PublicNext

PublicNext

06/05/2026 12:08 pm

Cinque Terre

4.65 K

Cinque Terre

0

ಸಂಬಂಧಿತ ಸುದ್ದಿ