ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ ಬಂದ್ ! ಪ್ರಯಾಣಿಕರ ಪರದಾಟ

ಹುಬ್ಬಳ್ಳಿ : ನೈಋತ್ಯ ರೈಲ್ವೆಯ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಗದಗ ರಸ್ತೆ ಬದಿಯ ಪ್ರವೇಶ ದ್ವಾರದಲ್ಲಿರುವ ಟಿಕೆಟ್ ಕೌಂಟರ್‌ ಶನಿವಾರ ಮುಚ್ಚಲಾಗಿದ್ದು, ಇದರಿಂದ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಸ್.! ವೀಕ್ಷಕರೇ ಗದಗ ರಸ್ತೆ ಬಳಿಯಿಂದ ರೈಲು ಪ್ರಯಾಣ ಬೆಳೆಸಲು ಬರುವ ಪ್ರಯಾಣಿಕರು ಗದಗ ರಸ್ತೆಯ ಪ್ರವೇಶ ದ್ವಾರದಲ್ಲೇ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಬರುತ್ತಾರೆ. ಆದರೆ, ಅಲ್ಲಿನ ಕೌಂಟರ್‌ಗಳು ಬಂದ್ ಆಗಿರುವುದರಿಂದ ಅನಿವಾರ್ಯವಾಗಿ ಮುಖ್ಯ ದ್ವಾರದವರೆಗೆ ಅಥವಾ ನಿಲ್ದಾಣದ ಒಳಭಾಗಕ್ಕೆ ದೀರ್ಘ ದೂರ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮಯದ ಅಭಾವವಿರುವ ಪ್ರಯಾಣಿಕರು ತಮ್ಮ ರೈಲುಗಳನ್ನು ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದಾರೆ.

ಕೆಲಸದ ನಿಮಿತ್ತ ನಿತ್ಯ ಗದಗ ರಸ್ತೆಯ ಮೂಲಕವೇ ರೈಲ್ವೆ ನಿಲ್ದಾಣಕ್ಕೆ ಬರುತ್ತೇವೆ. ಆದರೆ ಟಿಕೆಟ್ ಕೌಂಟರ್ ಮುಚ್ಚಿರುವುದರಿಂದ ಟಿಕೆಟ್ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಗಿದೆ. ಇದರಿಂದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಎಂದು ಪ್ರಯಾಣಿಕರೊಬ್ಬರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಯಾಂತ್ರೀಕೃತ ಟಿಕೆಟ್ ವ್ಯವಸ್ಥೆಗಳಿದ್ದರೂ, ಕೆಲವು ಪ್ರಯಾಣಿಕರು ಕೌಂಟರ್ ಮೂಲಕವೇ ಟಿಕೆಟ್ ಪಡೆಯಲು ಆದ್ಯತೆ ನೀಡುತ್ತಾರೆ. ಇಂತಹ ಸಮಯದಲ್ಲಿ ಕೌಂಟರ್‌ಗಳನ್ನು ಬಂದ್ ಮಾಡಿರುವುದು ಪ್ರಯಾಣಿಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ರೈಲ್ವೆ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಶ್ರೀಧರ್ ಪೂಜಾರ, ಪಬ್ಲಿಕ್ ನೆಕ್ಸ್ಟ್‌, ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/05/2026 01:39 pm

Cinque Terre

140.85 K

Cinque Terre

1

ಸಂಬಂಧಿತ ಸುದ್ದಿ