ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಧಿವಾದಿ ಬೆಳಗೆರೆ ಕೃಷ್ಣಶಾಸ್ತ್ರಿಗಳ 111 ನೇ ಜಯಂತಿ ಕಾರ್ಯಕ್ರಮ..

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳೆಗೆರೆ ಗ್ರಾಮದಲ್ಲಿರುವ ಬೆಳಗೆರೆ ಕೃಷ್ಣಶಾಸ್ತ್ರಿಗಳ ಸ್ಮಾರಕ ಗುಡಿಸಲಿನಲ್ಲಿ ಮೇ.22 ರಿಂದ ಎರಡು ದಿನಗಳ ಕಾಲ ಕೃಷ್ಣಶಾಸ್ತ್ರಿಗಳ 111 ನೇ ಜಯಂತಿ ಕಾರ್ಯಕ್ರಮ ಆಚರಿಸಲು ಶಾರದಾಮಂದಿರ ವಿದ್ಯಾಸಂಸ್ಥೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

1990 ರ ಕಾಲಘಟ್ಟದಲ್ಲಿ ಶಾಸ್ತ್ರಿಗಳ ಕರ್ಮಶೀಲತೆ ಆರ್ಥಿಕ ಮತ್ತು ಸಾತ್ವಿಕ ಚೈತನ್ಯ ನೀಡಿದ ಸಂಸ್ಕೃತಿ ಕಾಪಾಡಿಕೊಳ್ಳಬೇಕಿದೆ. ಇದರ ಸಲುವಾಗಿ ಶಾಸ್ತ್ರಿಗಳ ಶಿಷ್ಯರು, ಅಭಿಮಾನಿಗಳು ಮತ್ತು ಸಾಹಿತ್ಯ ಹಿತಚಿಂತಕರು ಸೇರುವ ಎರಡು ದಿನಗಳ ಕಾರ್ಯಕ್ರಮದಲ್ಲಿ ' ನಾನಿದ್ದೂ ನನ್ನದೇನಿಲ್ಲ' ಎಂಬ ಕೃತಿ ಬಿಡುಗಡೆ ಸೇರಿ ಶಾಸ್ತ್ರಿಗಳ ಜತೆಗಿನ ನೂರು ವರ್ಷದ ವರ್ಧಂತಿಯ ಆಚರಣೆ, ಅವರ ಸಮಗ್ರ ಸಾಹಿತ್ಯವನ್ನೊಳಗೊಂಡ ' ನೂರರ ನೆನಪು' ಪುಸ್ತಕ ಲೋಕಾರ್ಪಣೆ ನಡೆಯಲಿದೆ ಎಂದು ವಿದ್ಯಾ ಮಂದಿರ ಕಾರ್ಯಕಾರಿ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿದ್ಯಾ ಸಂಸ್ಥೆ ಮನವಿ ಮಾಡಿದೆ

Edited By : PublicNext Desk
Kshetra Samachara

Kshetra Samachara

21/05/2026 09:25 am

Cinque Terre

1.44 K

Cinque Terre

0

ಸಂಬಂಧಿತ ಸುದ್ದಿ