ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮ್ ಚರಣ್‌ಗೆ ನ್ಯಾಷನಲ್ ಅವಾರ್ಡ್ ಗ್ಯಾರಂಟಿ ಬೆಂಗಳೂರಲ್ಲಿ ಶಿವಣ್ಣ ಭವಿಷ್ಯ !

ಬೆಂಗಳೂರು : ಗ್ಲೋಬಲ್ ಸ್ಟಾರ್ ರಾಮ್ ಚರಣ್, ಕ್ಯೂಟ್ ಬ್ಯೂಟಿ ಜಾನ್ವಿ ಕಪೂರ್ ಮತ್ತು ನಮ್ಮ ಹೆಮ್ಮೆಯ ಕರುನಾಡ ಚಕ್ರವರ್ತಿ ಶಿವಣ್ಣ ನಟಿಸಿರೋ 'ಪೆದ್ದಿ' ಸಿನಿಮಾ ಸೌಂಡ್ ಈಗ ಬೆಂಗಳೂರಿನಲ್ಲಿ ಜೋರಾಗಿದೆ. ಜೂನ್ 4 ರಂದು ರಿಲೀಸ್ ಆಗ್ತಿರೋ ಈ ಚಿತ್ರದ ಭರ್ಜರಿ ಪ್ರೆಸ್ ಮೀಟ್ ಸಿಲಿಕಾನ್ ಸಿಟಿಯಲ್ಲಿ ನಡೀತು.

ಇವೆಂಟ್‌ನಲ್ಲಿ ಮಾತನಾಡಿದ ಶಿವಣ್ಣ, 'ಈ ಸಿನಿಮಾದಲ್ಲಿ ನನ್ನದು ತರಬೇತುದಾರನಂತಹ ಎಮೋಷನಲ್ ರೋಲ್. ರಾಮ್ ಚರಣ್ ಅಭಿನಯ ನೋಡಿ ಕಣ್ಣೀರು ಬಂತು, ಅವರಿಗೆ ಈ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಸಿಗೋದು ಗ್ಯಾರಂಟಿ' ಅಂತ ಅಂದ್ರು.ಇನ್ನು ರಾಮ್ ಚರಣ್, 'ಶಿವಣ್ಣ ಜೊತೆ ನಟಿಸಿದ್ದು ನನ್ನ ಜನ್ಮಧನ್ಯ. ಇದು ನನ್ನ ಕೆರಿಯರ್‌ನಲ್ಲೇ ಅತ್ಯಂತ ಪ್ರಾಮಾಣಿಕ ಸಿನಿಮಾ' ಅಂತ ಎಮೋಷನಲ್ ಆದ್ರು. ಜಾನ್ವಿ ಕಪೂರ್ ಕೂಡ ಕನ್ನಡಿಗರ ಪ್ರೀತಿಗೆ ಥ್ಯಾಂಕ್ಸ್ ಹೇಳಿದ್ರು. ಸ್ಪೋರ್ಟ್ಸ್ ಮತ್ತು ಎಮೋಷನ್ ತುಂಬಿರೋ ಈ 'ಪೆದ್ದಿ' ನೋಡೋಕೆ ನೀವೆಷ್ಟು ಕಾಯ್ತಿದ್ದೀರಾ? ಕಮೆಂಟ್ ಮಾಡಿ.

Edited By :
PublicNext

PublicNext

26/05/2026 06:17 pm

Cinque Terre

19.28 K

Cinque Terre

2

ಸಂಬಂಧಿತ ಸುದ್ದಿ