ನಾಸಿಕ್: ಮಹಾರಾಷ್ಟ್ರದ ಹೆದ್ದಾರಿಗಳಲ್ಲಿ ರಸ್ತೆ ಅಪಘಾತಗಳ ಸರಣಿ ಮುಂದುವರಿದಿದ್ದು ಮತ್ತೊಂದು ಭೀಕರ ಹಿಟ್ ಆಂಡ್ ರನ್ ಅಪಘಾತ ಸಂಭವಿಸಿದೆ. ಚಾಲಕರ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಬಲಿಯಾಗುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಾಸಿಕ್-ಮುಂಬೈ ಹೆದ್ದಾರಿಯಲ್ಲಿ ನಡೆದಿರುವ ಮನಕಲಕುವ ಹಿಟ್ ಆಂಡ್ ರನ್ ಘಟನೆಯ ಸಿಸಿಟಿವಿ (CCTV) ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ರಕ್ತ ಕುದಿಯುವಂತೆ ಮಾಡಿದೆ.
ವಯಸ್ಸಾದ 65 ವರ್ಷದ ವೃದ್ಧೆಯೊಬ್ಬರು ತಲೆಯ ಮೇಲೆ ನೀರಿನ ಬಿಂದಿಗೆಗಳನ್ನು ಹೊತ್ತುಕೊಂಡು ಹೆದ್ದಾರಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಹಿಂದಿನಿಂದ ಅತಿ ವೇಗವಾಗಿ ಬಂದ ಬಿಳಿ ಬಣ್ಣದ ಸೆಡಾನ್ ಕಾರೊಂದು ವೃದ್ಧೆಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆ ವೃದ್ಧೆ ಗಾಳಿಯಲ್ಲಿ ಹಲವು ಅಡಿ ಎತ್ತರಕ್ಕೆ ಜಿಗಿದು ರಸ್ತೆಯ ಮೇಲೆ ಬಿದ್ದಿದ್ದಾರೆ. ಆದರೆ, ಮಾನವೀಯತೆಯನ್ನೇ ಮರೆತ ಕಾರು ಚಾಲಕ ಸಹಾಯ ಮಾಡಲು ನಿಲ್ಲಿಸದೇ ಅಲ್ಲಿಂದ ವೇಗವಾಗಿ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಈ ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.
PublicNext
27/05/2026 03:09 pm
LOADING...