ಕಡೂರು: ಮುಂದಿನ ಓದಿಗೆ ಪೋಷಕರಲ್ಲಿ ಹಣವಿಲ್ಲದ ಕಾರಣಕ್ಕೆ ಹಾಗೂ ಹದಿನೆಂಟು ವರ್ಷ ತುಂಬುತ್ತಿದ್ದಂತೆ ಮದುವೆ ಮಾಡಲು ಹೆತ್ತವರು ಯೋಚಿಸುತ್ತಿದ್ದ ವಿಷಯದಿಂದ ಮನನೊಂದ ಅಪ್ರಾಪ್ತ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಕಡೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿದ್ದ 17 ವರ್ಷ 8 ತಿಂಗಳ ಪ್ರಾಯದ ಈ ಬಾಲಕಿಗೆ ಮುಂದೆ ಓದಬೇಕೆಂಬ ಹೆಬ್ಬಯಕೆಯಿತ್ತು. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಆಕೆಯ ಮುಂದಿನ ಶಿಕ್ಷಣಕ್ಕೆ ಪೋಷಕರಲ್ಲಿ ಹಣವಿರಲಿಲ್ಲ. ಇದರ ನಡುವೆ, ಮಗಳಿಗೆ 18 ವರ್ಷ ತುಂಬಿದ ತಕ್ಷಣವೇ ಮದುವೆ ಮಾಡಬೇಕೆಂದು ಪೋಷಕರು ತಮ್ಮೊಳಗೆ ಮಾತನಾಡಿಕೊಂಡಿದ್ದರು. ಈ ವಿಷಯದಿಂದ ತೀವ್ರವಾಗಿ ಬೇಸರಗೊಂಡಿದ್ದ ಬಾಲಕಿ, ಮೇ 12 ರಂದು ಬೆಳಗ್ಗೆ ತನ್ನ ಮೊಬೈಲ್ ಫೋನನ್ನು ಮನೆಯಲ್ಲೇ ಬಿಟ್ಟು ಯಾರಿಗೂ ತಿಳಿಸದೆ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಮಗಳು ಕಾಣೆಯಾದ ತಕ್ಷಣವೇ ಆತಂಕಗೊಂಡ ಪೋಷಕರು ಮತ್ತು ಸಂಬಂಧಿಕರು ಆಕೆಯ ಸ್ನೇಹಿತರ ಮನೆಗಳು ಸೇರಿದಂತೆ ಸಂಭಾವ್ಯ ಎಲ್ಲಾ ಸ್ಥಳಗಳಲ್ಲೂ ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕಿಯ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ, ಅಸಹಾಯಕ ಹೆತ್ತವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Kshetra Samachara
29/05/2026 09:57 am
LOADING...