ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಪ್ರೈಓವರ್‌ನಲ್ಲಿ ಭಾರೀ ಗಾತ್ರದ ಸಿಮೆಂಟ್ ಕಲ್ಲಿನ ತುಂಡು ಕುಸಿತ

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಫೈಓವರ್‌ನ ಕೆಳಭಾಗದಿಂದ ಬಾರಿ ಗಾತ್ರದ ಸಿಮೆಂಟ್ ಕಲ್ಲಿನ ತುಂಡು ಮಂಗಳವಾರ ಸಂಜೆ ಬಿದ್ದಿದ್ದು ಯಾರೂ ಇಲ್ಲದರಿಂದ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಸಂಜೆ ವೇಳೆ ಟ್ರೈಓವರ್‌ನ ಕೆಳ ಭಾಗದ ಒಂದು ತುಂಡು ದಿಢೀ‌ರ್ ಕುಸಿದು ಬಿದ್ದಿದೆ. ಆ ವೇಳೆ ದ್ವಿಚಕ್ರ ಸವಾರರು ಅಥವಾ ಪಾದಚಾರಿಗಳು ಹೋಗುತ್ತಿದ್ದರೆ ಭಾರಿ ಅಪಾಯ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರೈಓವರ್‌ನ ಇತರೆ ಭಾಗದಲ್ಲೂ ಸಿಮೆಂಟ್ ಕಲ್ಲುಗಳು ಸಡಿಲವಾಗಿದ್ದು, ಯಾವಾಗ ಬೇಕಾ ದರೂ ಕೆಳಗೆ ಬೀಳುವ ಸಾಧ್ಯತೆ ಇದೆ. ಪ್ರತಿನಿತ್ಯ ನೂರಾರು ವಾಹನಗಳು, ಪಾದಚಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣ ಸ್ಥಳ ಪರಿಶೀಲನೆ ನಡೆಸಬೇಕು. ಸಡಿಲವಾಗಿರುವ ಕಾಂಕ್ರೀಟ್ ಭಾಗಗಳನ್ನು ತೆರವುಗೊಳಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ತಾತ್ಕಾಲಿಕವಾಗಿ ಪ್ರೈಓವ‌ರ್ ಕೆಳಭಾಗದಲ್ಲಿ ಜನರು ನಿಲ್ಲದಂತೆ ಎಚ್ಚರಿಕೆ ಫಲಕ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

03/06/2026 03:24 pm

Cinque Terre

218

Cinque Terre

0

ಸಂಬಂಧಿತ ಸುದ್ದಿ