ಧಾರವಾಡ: ಧಾರವಾಡ ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ 110/33/11 ಕೆವಿ ಅಳ್ನಾವರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ 1ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 11 ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಧಾರವಾಡ ತಾಲೂಕು ಹಾಗೂ ಅಳ್ನಾವರ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
110 ಕೆ.ವಿ ಎನ್.ಡಬ್ಲು.ಆರ್ ರೈಲ್ವೆ ಟಿ.ಎಸ್.ಎಸ್ ಮಾರ್ಗ, 33 ಕೆ.ವಿ ಅರವಟಗಿ ಮಾರ್ಗ, 11 ಕೆ.ವಿ ಮಾರ್ಗ ವ್ಯಾಪ್ತಿಯ ಬೆಣಚಿ, ಹುಲ್ಲಿಕೇರಿ, ಡೋರಿ, ಅಳ್ನಾವರ, ವಿದ್ಯಾನಗರ, ಸ್ಕೋಲ್, ಕಡಬಗಟ್ಟಿ, ಬಾಲಗೇರಿ, ಹಿಂಸಗೇರಿ, ಗೋದಳ್ಳಿ, ಲಿಂಗನಮಠ, ಔರತಬೈಲ್, ಕಿವಡಬೈಲ್, ದೋಪೆನಟ್ಟಿ, ಹುಲ್ಲಿಕೇರಿ, ಅಂಬೊಳ್ಳಿ, ಕುಂಬಾರಗೊಪ್ಪ, ಶಿವನಗರ, ಕಂಬಾರಗಣವಿ, ಬಸವೇಶ್ವರ ನಗರ, ಹೊನ್ನಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
09/06/2026 06:52 pm
LOADING...