ಧಾರವಾಡ : 110 ಕೆ.ವಿ ತಡಸಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂನ್ 16 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 1ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 16 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಧಾರವಾಡ ತಾಲೂಕಿನ ತಡಸಿನಕೊಪ್ಪ, ಜೋಗೆಲ್ಲಾಪುರ, ಇಟ್ಟಿಗಟ್ಟಿ, ಕೆ.ಹೆಚ್.ಬಿ, ಉದಯಗಿರಿ, ವನಸಿರಿ ನಗರ, ರಾಜಾಜಿ ನಗರ, ಸತ್ತೂರ ವಿಲೇಜ್, ಸತ್ತೂರ, ಆಶ್ರಯ ಕಾಲೋನಿ, ಎನ್.ಜಿ.ಇ.ಎಫ್, ಎಸ್.ಡಿ.ಎಮ್ ಮೆಡಿಕಲ್ ಕಾಲೇಜ್, ಎಸ್.ಡಿ.ಎಮ್ ಡೆಂಟಲ್ ಕಾಲೇಜ್, 2ನೇ ಕೆ.ಹೆಚ್.ಬಿ ಹಂತ, ಐಐಐಟಿ, ಕೆ.ಐ.ಏ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾ ಸತ್ತೂರ, ರಾಶಿಫಾರ್ಮ, ನವಲೂರ ರೇಲ್ವೆ ಸ್ಟೇಶನ್, ಸಂಜೀವಿನಿ ಪಾರ್ಕ, ಹುಬ್ಬಳ್ಳಿ-ಧಾರವಾಡ ಡ್ಯೂರೆಬಲ್ ಗೂಡ್ಸ(ಏಕಸ್), ಕೆ.ಎಂ.ಎಫ್ ರಾಯಾಪುರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/06/2026 02:38 pm
LOADING...