ಧಾರವಾಡ: 100 ಕೆವಿ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ 11 ಕೆ.ವಿ ವೆಂಕಟೇಶ್ವರ ಫೀಡರ್ ಮಾರ್ಗದ ಮೇಲೆ ತುರ್ತುಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಜೂ.18ರಂದು ಧಾರವಾಡ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜೂನ್ 18 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಧಾರವಾಡದ ಶಾಕಾಂಬರಿ ನಗರ, ಗುರುದೇವ ನಗರ, ಸರಸ್ವತಪುರ, ಮಸಾಲಗರ ಓಣಿ, ರಜತಗಿರಿ ವಾಟರ್ ಟ್ಯಾಂಕ್, ಕಲಘಟಗಿ ರಸ್ತೆ, ಟೋಲ್-ನಾಕಾ, ಮಾಳಮಡ್ಡಿ, ಸನ್ಮತಿ ಮಾರ್ಗ, ಲಕ್ಷ್ಮೀಸಿಂಗನಕೇರಿ, ನಗರಕರ ಕಾಲೋನಿ, ಮಹಿಶಿ ರಸ್ತೆ, ರಾಯಚೂರು ಲೇಔಟ್, ಶಾಂತಿ ನಗರ, ಜಿಲ್ಲಾ ಪಂಚಾಯತ್ ಕಚೇರಿ, ತಹಶೀಲ್ದಾರ್ ಕಚೇರಿ, ರೈಲ್ವೆ ಸ್ಟೇಷನ್ ರಸ್ತೆ, ಗೌಳಿ ಗಲ್ಲಿ, ರಾಯರಮಠ, ಕಬ್ಬೂರು ರಸ್ತೆ, ಗೋಪಾಲಪುರ, ಯಮ್ಮಿಕೇರಿ, ಜನ್ನತ ನಗರ, ಶಿವಾನಂದ ನಗರ, ಡಿ.ಕೆ.ನಾಯ್ಕರ್, ಮಿಷನ್ ಕಂಪೌಂಡ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
Kshetra Samachara
16/06/2026 09:07 pm
LOADING...