ಧಾರವಾಡ : 110 ಕೆವಿ ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ 1ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಜೂನ್ 13ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಧಾರವಾಡ ತಾಲೂಕಿನ ಎತ್ತಿನಗುಡ್ಡ, ಅಗ್ರಿ ಯೂನಿವರ್ಸಿಟಿ ಕ್ಯಾಂಪಸ್, ಕುಮಾರೇಶ್ವರ ನಗರ, ಸೈದಾಪುರ, ಬೆಳಗಾವಿ ಮೇನ್ ರೋಡ್, ನಾರಾಯಣಪುರ, ಸಿ.ಐ.ಟಿ.ಬಿ, ಕೆ.ಹೆಚ್.ಬಿ ಕಾಲೋನಿ, ಸಂಪಿಗೆ ನಗರ, ತಾವರಗೇರಿ ಹಾಸ್ಪಿಟಲ್, ಸನ್ಮತಿ ನಗರ, ಜಿ.ಟಿ.ಸಿ ಕ್ಯಾಂಪಸ್, ಮೆಹಬೂಬ್ ನಗರ, ಹಾಶ್ಮಿ ನಗರ, ಮಾಳಾಪುರ, ಏರ್‌ಟೆಕ್, ಜಯಲಕ್ಷ್ಮೀ ಇಂಡಸ್ಟ್ರೀಸ್, ಬಸವ ಕಾಲೋನಿ, ಪವರ್ ಗ್ರಿಡ್, ಪೆಪ್ಸಿ, ಕಿಲ್ಲಾ, ಸಾಧುನವರ ಎಸ್ಟೇಟ್, ನರೇಂದ್ರ, ಮಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ಶಿರಡಿನಗರ, ತಾಜನಗರ, ಬಿ.ಎಸ್.ಕೆ ಲೇಔಟ್, ಮಾಳಾಪುರ ಲಾಸ್ಟ್ ಬಸ್‌ಸ್ಟಾಪ್, ರಾಜನಗರ, ತಮದಂಡಿ ಪ್ಲಾಟ್, ಹರಿಜನಕೇರಿ, ಫೈರ್ ಸ್ಟೇಷನ್, ರಾಮನಗೌಡಾ ಹಾಸ್ಪಿಟಲ್, ದುರ್ಗಾದೇವಿ ದೇವಸ್ಥಾನ, ಮರಾಠ ಕಾಲೋನಿ, ಕೊಪ್ಪದಕೇರಿ, ಗುಲಗಂಜಿಕೊಪ್ಪ, ಎಂ.ಬಿ ನಗರ, ಸಿವಿಲ್ ಹಾಸ್ಪಿಟಲ್, ನಿತಿನ್ ನಗರ, ಓಲ್ಡ್ ಎಸ್.ಪಿ ಸರ್ಕಲ್, ಲಕ್ಷ್ಮೀ ಗುಡಿಯ ಸುತ್ತಮುತ್ತಲಿನ ಪ್ರದೇಶ, ಪೊಲೀಸ್ ಹೆಡ್ ಕ್ವಾರ್ಟರ್ಸ್ ಪ್ರದೇಶ, ಬೇಂದ್ರೆ ನಗರ, ಹಿರೇಮಠ ಲೇಔಟ್, ಐಶ್ವರ್ಯ ನ್ಯಾನೋಸಿಟಿ, ನಂದಿ ಹೈವೇ ಬೈಪಾಸ್, ಮಲ್ಲಿಗೆ ನಗರ, ಗುರುನಗರ, ಶ್ರೀಗುರು ನಗರ, ಕೆ.ಹೆಚ್.ಬಿ ಲೇಔಟ್, ಮಲ್ಲಿಗವಾಡ, ಮೂಕಾಂಬಿಕಾ ನಗರ, ಗೌಸಿಯಾ ಟೌನ್, ಸುಂದರ್ ನಗರ, ಸೈನಿಕ್ ನಗರ, ಜೋಶಿ ಫಾರ್ಮ್, ಮುಧೋಳಕರ್ ಕಾಂಪೌಂಡ್, ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/06/2026 03:59 pm