ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ನಿಸ್ವಾರ್ಥ ಸೇವೆಯಿಂದ ಸ್ಮರಣೀಯವಾಗಬೇಕು - ಡಾ. ಸಿದ್ದು ಹುಲ್ಲೋಳಿ

ಬೆಳಗಾವಿ : ಯಾವುದೇ ಕ್ಷೇತ್ರದಲ್ಲಿ ನಾವು ಸಲ್ಲಿಸುವ ಸೇವೆಗಳು ನಿಸ್ವಾರ್ಥದಿಂದ ಕೂಡಿದಾಗ ಸ್ಮರಣೀಯವಾಗಲು ಸಾಧ್ಯವೆಂದು ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ಹೇಳಿದರು.

ಗುರುವಾರ ನಗರದ ಗೋವಾವೇಸನಲ್ಲಿರುವ ಪಾಲಿಕೆಯ (ಕಂದಾಯ) ದಕ್ಷಿಣ ವಿಭಾಗದಲ್ಲಿ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಮಾತೃ ಇಲಾಖೆಗೆ ಮರಳಿ ವರ್ಗಾವಣೆಯಾಗಿರುವ ಧರ್ಮನಾಥ ಕೋರಿ ಅವರ ಬೀಳ್ಕೊಡುಗೆ ಹಾಗೂ ದಕ್ಷಿಣ ವಲಯ ಆಯುಕ್ತರಾಗಿ ನೂತನವಾಗಿ ನಿಯುಕ್ತಿ ಗೊಂಡಿರುವ ಜಗದೀಶ ಎಸ್ ಅವರ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ತವ್ಯದ ಬದ್ಧತೆಯ ಜೊತೆಗೆ ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಹಾಗೂ ಸಿಬ್ಬಂದಿಯೊಂದಿಗೆ ಸಹಕಾರದಿಂದ ಕಾರ್ಯನಿರ್ವಹಿಸಿ ಸೇವಾ ಅವಧಿಯನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಧರ್ಮನಾಥ ಕೋರಿಯವರ ಸೇವೆ ಮಾದರಿಯಾಗಿದೆ ಎಂದು ಹೇಳಿದರು.

ನಗರಸೇವಕರಾದ ಮಂಗೇಶ ಪವಾರ, ಶ್ರೀಶೈಲ ಕಾಂಬಳೆ, ಗಿರೀಶ ದೋಂಗಡಿ ಇತರರು ಅತಿಥಿಗಳಾಗಿದ್ದರು. ಧರ್ಮನಾಥ ಕೋರಿ ಹಾಗೂ ಜಗದೀಶ್ ಎಸ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

Edited By :
Kshetra Samachara

Kshetra Samachara

11/06/2026 07:24 pm

Cinque Terre

2.24 K

Cinque Terre

0

ಸಂಬಂಧಿತ ಸುದ್ದಿ