ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಭಾರತದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿದೆ; ದೇವರಾಜ್ ಶೆಟ್ಟಿ

ಚಿಕ್ಕಮಗಳೂರು: ಯುದ್ಧದ ಪರಿಸ್ಥಿತಿ ಇರುವುದರಿಂದ ಸಣ್ಣಪುಟ್ಟ ಬೆಲೆ ಏರಿಕೆಯ ವ್ಯತ್ಯಾಸವಾಗುವುದು ಸಹಜ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಲೆ ಏರಿಕೆ ಆ ಮಟ್ಟಕ್ಕೆ ಹೋಗಿಲ್ಲ. ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಚಿಸಿ ಸಣ್ಣ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದ್ದಾರೆ. ದೇಶಕ್ಕೋಸ್ಕರ ಮಾಡಿರುವ ಈ ಕಾರ್ಯಕ್ಕೆ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಹಾಗೂ ದೇಶವನ್ನು ಪ್ರೀತಿಸುವವರು ಬೆಂಬಲ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಷ್ಟೇ ಬೆಲೆ ಏರಿಕೆಯಾದರೂ ನರೇಂದ್ರ ಮೋದಿ ಅವರ ಜೊತೆ ನಿಲ್ಲುವುದಾಗಿ ಹಾಗೂ ಕಾಂಗ್ರೆಸ್ ನಾಯಕರ ಇಂತಹ ಪ್ರತಿಭಟನೆಗಳಿಗೆ, ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ತಿಳಿಸಿದ್ದಾರೆ.

Edited By :
PublicNext

PublicNext

11/06/2026 07:40 pm

Cinque Terre

8.95 K

Cinque Terre

0

ಸಂಬಂಧಿತ ಸುದ್ದಿ