ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಹೊಸಪೇಟೆಯಲ್ಲಿ ರೈತರ ಬೃಹತ್ ಪಾದಯಾತ್ರೆ

ವಿಜಯನಗರ : ಜಿಲ್ಲೆಯ ಹೊಸಪೇಟೆಯಲ್ಲಿ ಡಿಎಪಿ ಮತ್ತು ರಸಗೊಬ್ಬರ ಬೆಲೆ ಏರಿಕೆ ವಿರುದ್ಧ ಪಾದಯಾತ್ರೆ ನಡೆಸಲಾಯಿತು. ಕರ್ನಾಟಕ‌ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜೆ. ಕಾರ್ತಿಕ್ ಬಣದಿಂದ ಸಾಯಿಬಾಬಾ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಮೆರವಣಿಗೆ ನಡೆಸಿದರು.

ಮುಂಬರುವ ದಿನಗಳಲ್ಲಿ ಎಫ್ಐಡಿ ಗೊಂದಲ, ಯೂರಿಯಾ ಡಿಎಪಿ ಗೊಬ್ಬರ ಮಾರುಕಟ್ಟೆಗಳಲ್ಲಿ ಮತ್ತು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇಲಾಖೆಯಲ್ಲಿ ಎಫ್ಐಡಿ ಮೂಲಕ ಗೊಬ್ಬರ ಕೊಡುವುದನ್ನು ತಕ್ಷಣ ಕೈಬಿಡಬೇಕು ಅಂತ ಆಗ್ರಹಿಸಿದರು.

ಅಲ್ಲದೇ, ಮುಂಬರುವ ದಿನಗಳಲ್ಲಿ ಎಫ್ಐಡಿ ಲಿಂಕ್ ಆಧಾರಿತ ಔಷಧಿ ಕೊಡುವುದನ್ನು ರದ್ದು ಮಾಡಬೇಕು ಅಂತಾ ಆಗ್ರಹಿಸಿದರು. ರಸಗೊಬ್ಬರಗಳ ಬೆಲೆ ಇಳಿಕೆ ಮಾಡಬೇಕು ಮತ್ತು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಅಂತಾ ಒತ್ತಾಯಿಸಿದ್ರು.

Edited By : Manjunath H D
PublicNext

PublicNext

11/06/2026 08:16 pm

Cinque Terre

13.99 K

Cinque Terre

0

ಸಂಬಂಧಿತ ಸುದ್ದಿ