ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಡ್ಲಿಗಿ: ಮಕ್ಕಳ ಶಿಕ್ಷಣ ಅಭಿವೃದ್ಧಿಗೆ ಸರ್ಕಾರಿ ಶಾಲೆಗಳೇ ಆಧಾರ - ಸಮಾಜ ಸೇವಕ ಅಬ್ದುಲ್ ರಹಮಾನ್

ಕೂಡ್ಲಿಗಿ: ಸರ್ಕಾರಿ ಶಾಲೆಗಳತ್ತ ಎಲ್ಲರೂ ಒಲವು ತೋರಬೇಕಿದೆ ಎಂದು ಸಮಾಜ ಸೇವಕ ಡಾ. ಅಬ್ದುಲ್ ರಹಮಾನ್ ನಾಗರಿಕರಿಗೆ ಕರೆ ನೀಡಿದರು. ಕೂಡ್ಲಿಗಿ ಪಟ್ಟಣದ ಶ್ರೀ ಬಂಡ್ರಿಲಕ್ಷ್ಮಿ ಚಿನ್ನಪ್ಪಶೆಟ್ಟಿ, 7ನೇ ವಾರ್ಡ್ ಸರ್ಕಾರಿ ಶಾಲೆಯಲ್ಲಿ , ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಹಾಗೂ ನಾಡಿನ ಗಣ್ಯರೆಲ್ಲರೂ ಸರ್ಕಾರಿ ಶಾಲೆಯಲ್ಲಿ ಓದಿರುವಂತವರೇ ಆಗಿದ್ದಾರೆ. ದೊಡ್ಡ ದೊಡ್ಡ ಸರ್ಕಾರಿ ಹುದ್ದೆಯಲ್ಲಿರುವವರೆಲ್ಲರ ಬಹುತೇಕ ಗಣ್ಯರೆಲ್ಲರೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಆಗಿದ್ದಾರೆ. ಮಕ್ಕಳಿಗೆ

ಗುಣಮಟ್ಟದ ಶಿಕ್ಷಣ ದೊರೆಯಬೇಕೆಂದರೆ ಅದು ಸರ್ಕಾರಿ ಶಾಲೆಯಲ್ಲಿ ಮಾತ್ರ ಸಾಧ್ಯ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಹಾಗೂ ಉನ್ನತ ಪದವಿಗಳಲ್ಲಿ ಮಹತ್ತರ ಸಾಧನೆಗೈದವರು , ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆಗೆ ನೇಮಕವಾಗಿರುತ್ತಾರೆ. ಆದರೆ ಖಾಸಗಿ ಶಾಲೆಗಳ ಕಟ್ಟಡಗಳು ಮಾತ್ರ ಬೃಹದಾಕಾರಗಳಲ್ಲಿರುತ್ತವೆ , ಆದರೆ ಅದರಲ್ಲಿ ಶಿಕ್ಷಕರು ಸರ್ಕಾರಿ ಶಿಕ್ಷಕರಂತೆ ವ್ಯಾಸಂಗದಲ್ಲಿ ಸಾಧನೆ ಮಾಡಿರುವ ಸಾಧ್ಯತೆ ಕಡಿಮೆ ಅಂತ ಹೇಳಿದರು.

Edited By :
Kshetra Samachara

Kshetra Samachara

18/06/2026 12:36 pm

Cinque Terre

4.96 K

Cinque Terre

0

ಸಂಬಂಧಿತ ಸುದ್ದಿ