ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ವಿದ್ಯಾರ್ಥಿಗಳಿಗೆ ತಂಬಾಕಿನಿಂದ ಮನುಕುಲಕ್ಕೆ ಆಗುವ ಹಾನಿ ಬಗ್ಗೆ ಆರೋಗ್ಯ ಇಲಾಖೆಯಿಂದ ಜಾಗೃತಿ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಇಂಗಳಿಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ತಂಬಾಕಿನಿಂದ ಬರುವ ಕಾಯಿಲೆಗಳು, ಅದರಿಂದ ಯಾವ ರೀತಿ ಎಚ್ಚರಿಕೆಯಿಂದ ಇರಬೇಕು ಅನ್ನೋದ್ರ ಬಗ್ಗೆ ಜಾಗೃತಿ ಮಾಡಲಾಯಿತು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎಂ.ಪಿ.ದೊಡಮನಿ ಮಾತಾಡಿ, ತಂಬಾಕು ತ್ಯಜಿಸಿದರೆ ಆರೋಗ್ಯ ಸಂಪೂರ್ಣವಾಗಿ ಚೆನ್ನಾಗಿ ಇಟ್ಟುಕೊಳ್ಳಬಹುದು ಎಂದು ತಿಳಿಸಿದರು. ಜಿಲ್ಲಾ ತಂಬಾಕು ಕೋಶದ ಸಮಾಜ ಕಾರ್ಯಕರ್ತರಾದ ಬೋಜರಾಜು ತಂಬಾಕು ಸೇವನೆಯಿಂದ ನಾನಾ ಕಾಯಿಲೆ ಬರುತ್ತದೆ. ಗಂಟಲು ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಇತರೆ ಕಾಯಿಲೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಧರ್ಮನಗೌಡ ಮಕ್ಕಳನ್ನು ಕುರಿತು ತಂಬಾಕಿನಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡರೆ ಇಡೀ ಕುಟುಂಬ ನಾಶವಾಗುತ್ತದೆ. ಆದ್ದರಿಂದ ಮಕ್ಕಳು ತಂದೆ ತಾಯಿ ತಂಬಾಕು ಚಟ ಬಿಡಿಸಲು ಮಕ್ಕಳು ತಂದೆ ತಾಯಿಗಳಿಗೆ ಮಾರ್ಗದರ್ಶಕರಾದಾಗ ಮಾತ್ರ ಸಮಾಜ ಕುಟುಂಬ ಸುಧಾರಣೆ ಮಾಡಲು ಸಾಧ್ಯತೆ ಇದೆ ಅಂತ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮ ವೇಳೆ ಶಾಲೆಯ ಮುಖ್ಯ ಗುರುಗಳಾದ ಲಕ್ಷ್ಮೀದೇವಿ ಸಹ ಶಿಕ್ಷಕರಾದ ರವೀಂದ್ರನಾಥ್, ಆಶಾ ಗೀತಾ, ಕಳಕಪ್ಪ ಮಹಮ್ಮದ್ ಬೇಗಮ್ ಇದ್ದರು.

Edited By : Nagaraj Tulugeri
PublicNext

PublicNext

17/06/2026 03:46 pm

Cinque Terre

7.04 K

Cinque Terre

0

ಸಂಬಂಧಿತ ಸುದ್ದಿ