ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿನಿಮಾ ಸ್ಟೈಲ್ ಲೇಡಿ ಮರ್ಡರ್ ಮಿಸ್ಟ್ರಿ: ಕೊಲೆ ರಹಸ್ಯ ಭೇದಿಸಿದ ಹೊಳಲ್ಕೆರೆ ಪೊಲೀಸರು

ಚಿತ್ರದುರ್ಗ: ಇದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಸ್ನೇಹ ಪಬ್ಲಿಕ್ ಸ್ಕೂಲ್ ಮುಂಭಾಗದ ಶಿವಮೊಗ್ಗ ಹೈವೆ. ಇದೇ ಬೈಪಾಸ್ ರಸ್ತೆಯಲ್ಲಿ 8 ನೇ ತಾರೀಕು ಸೋಮವಾರ ಬೆಳಿಗ್ಗೆ ಅಪರಿಚಿತ ಮಹಿಳೆಯ ಶವವೊಂದು ನಿಗೂಢ ರೀತಿಯಲ್ಲಿ ಪತ್ತೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊಳಲ್ಕೆರೆ CPI ಶ್ರೀಶೈಲ ಚೌಗಲೆ ಹಾಗೂ PSI ಸಚ್ಚಿನ್ ಭೇಟಿ ನೀಡಿದರು. ಅಪರಿಚಿತ ಶವ ಯಾರದ್ದು ಅಂತ ಪರಿಶೀಲನೆ ಮಾಡುತ್ತಿದ್ದಂತೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ MC ಹಳ್ಳಿ ಗ್ರಾಮದ 48 ವರ್ಷದ ಸುಮಿತ್ರ ಅನ್ನೋದು ಪಕ್ಕಾ ಆಗಿತ್ತು. ಆದ್ರೆ ಥೇಟ್ ಆಕ್ಸಿಡೆಂಟ್ ಮಾದರಿಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರಿಗೆ ಅನುಮಾನ ಮೂಡಿಸಿತ್ತು.

ಇದನ್ನೇ ಬೆನ್ನತ್ತಿದ್ದ ಪೊಲೀಸರು ಅಪಘಾತವೋ ಅಥವಾ ಕೊಲೆಯೋ ಅನ್ನೋದರ ಪತ್ತೆಗೆ ಇಳಿದಿದ್ದರು. ಟೆಕ್ನಿಕಲ್ ದಾಖಲೆ ಪರಿಶೀಲನೆಗೆ ಮುಂದಾಗಿದ್ದ ಪೊಲೀಸರಿಗೆ ಇದೊಂದು ಅನೈತಿಕ ಸಂಬಂಧ ಅನ್ನೋದು ಗೊತ್ತಾಗಿತ್ತು. ಇದೇ ರೂಟ್ ನಲ್ಲಿ ಫೀಲ್ಡಿಗೆ ಇಳಿದಿದ್ದ ಪೊಲೀಸರು, ಮಾಜಿ ಯೋಧನೊಬ್ಬನನ್ನು ಬಂಧಿಸಿ, ವಿಚಾರಣೆ ಆರಂಭಿಸಿದರು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ MC ಹಳ್ಳಿ ನಿವಾಸಿ ಮಾಜಿ ಸೈನಿಕ ದೇವಕುಮಾರ್ ಹಾಗೂ ಸುಮಿತ್ರಾ ನಡುವೆ ಕಳೆದ 5 ವರ್ಷಗಳಿಂದ ಅನೈತಿಕ ಸಂಬಂಧ ಇರೋದು ಗೊತ್ತಾಗಿತ್ತು.

ವಾ.ಓ೨: ಇನ್ನೂ ಸುಮಿತ್ರಾ ಇದ್ದಷ್ಟು ದಿನ ಊರಲ್ಲಿ ಮರ್ಯಾದೆ ಹೋಗುತ್ತೆ ಅಂತ ದೇವಕುಮಾರ್ ಯೋಚನೆ ಮಾಡಿದ್ದ. ಇದೇ ಕಾರಣಕ್ಕೆ ಆರೋಪಿಗಳಾದ ದಿಲೀಪ್ ಕುಮಾರ್ ಹಾಗೂ ಭರತ್ ಜೊತೆ ಸೇರಿ ಈಕೆಯ ಕೊಲೆಗೆ ಸ್ಕೆಚ್ ಹಾಕಿದ್ದ. ಜೂನ್ 7 ರಂದು ಭಾನುವಾರ ಸುಮಿತ್ರಾಳಿಗೆ ಫೋನ್ ಮಾಡಿದ್ದ ದೇವಕುಮಾರ್ , ತುಮಕೂರಿಗೆ ಬರುವಂತೆ ಹೇಳಿದ್ದ. ತುಮಕೂರಿಗೆ ಪ್ರಿಯತಮೆ ಬರ್ತಿದ್ದಂತೆ ಕಾರಿನಲ್ಲಿ ಹತ್ತಿಸಿಕೊಂಡಿದ್ದ ಆರೋಪಿ ದೇವಕುಮಾರ್ ಅಂಡ್ ಗ್ಯಾಂಗ್ ನೇರವಾಗಿ ಹಿರಿಯೂರಿನತ್ತ ವಾಪಸ್ ಕರೆತಂದಿದ್ದರು. ಈ ವೇಳೆ ಕಾರಿನಲ್ಲೇ ಆಕೆಗೆ ಮನ ಬಂದಂತೆ ಮೂವರು ಥಳಿಸಿದ್ದರು.

ನಂತರ ಹೊಳಲ್ಕೆರೆ ಬಳಿಗೆ ಬಂದಿದ್ದ ಆರೋಪಿಗಳು, ಆಕೆಯ ತವರು ಮನೆಗೆ ಮಲ್ಲಾಡಿಹಳ್ಳಿ ಬಳಿಯ, ಹೈವೆ ರಸ್ತೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಯಾರಿಗೂ ಅನುಮಾನ ಬಾರದಂತೆ ಆಕೆಯ ಮೇಲೆ ಕಾರು ಹತ್ತಿಸಿ, ಆಕ್ಸಿಡೆಂಟ್ ಕಥೆ ಕಟ್ಟಿದ್ದರು. ಆದ್ರೆ ಪೊಲೀಸರು ಮಾತ್ರ ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ಆರಂಭಿಸುತ್ತಿದ್ದಂತೆ ಆರೋಪಿ ದೇವಕುಮಾರ್ ಹಾಗೂ ದಿಲೀಪ್ ಕುಮಾರ್ ಕೊಲೆಯ ರಹಸ್ಯ ಬಾಯ್ಬಿಟ್ಟಿದ್ದಾರೆ. ಮತ್ತೋರ್ವ ಆರೋಪಿ ಭರತ್ ನಾಪತ್ತೆಯಾಗಿದ್ದು, ಆತನ ಪತ್ತೆಗೂ ಬಲೆ ಬೀಸಿದ್ದಾರೆ. ಇನ್ನೂ ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ವಾ.ಓ೩: ಒಟ್ಟಾರೆ ಐದು ವರ್ಷ ಜೊತೆ ಇಟ್ಟುಕೊಂಡವಳನ್ನೇ 15 ಲಕ್ಷ LIC ವಿಮೆ ಹಣಕ್ಕಾಗಿ, ಸಿನಿಮಾ ಸ್ಟೈಲ್ ನಲ್ಲಿ ಮಾಜಿ ಸೈನಿಕ ಹತ್ಯೆ ಮಾಡಿದ್ದಾನೆ. ಆದ್ರೆ ಸತ್ಯ ಮಾತ್ರ ಮುಚ್ಚಿಡೋದಕ್ಕೆ ಆಗೋದಿಲ್ಲ ಅನ್ನೋದು ಮತ್ತೋಮ್ಮೆ ಸಾಬೀತಾಗಿದೆ. ಇಂಥ ಖತರ್ನಾಕ್ ಕೊಲೆಗಡುಕರಿಗೆ ತಕ್ಕ ಶಿಕ್ಷೆಯಾಗಲಿ ಅನ್ನೋದು ನಮ್ಮ ಆಶಯ...

Edited By : Somashekar
PublicNext

PublicNext

12/06/2026 11:43 am

Cinque Terre

12.99 K

Cinque Terre

0

ಸಂಬಂಧಿತ ಸುದ್ದಿ