ಚಿತ್ರದುರ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನನ್ನು ನಟ ದರ್ಶನ್ ಅಂಡ್ ಗ್ಯಾಂಗ್ ಕೊಲೆ ಮಾಡಿ ಎರಡು ವರ್ಷ ಕಳೆದಿದೆ. ಈ ನಡುವೆ ಮೃತ ರೇಣುಕಾಸ್ವಾಮಿ ಅಜ್ಜಿ ಶತಾಯುಷಿ ಪ್ರಮೀಳಾದೇವಿ (101) ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಮೃತ ಅಜ್ಜಿ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ಚಿತ್ರದುರ್ಗದ ನಿವಾಸದಲ್ಲೇ ದೈವಾಧೀನರಾಗಿದ್ದಾರೆ. ಪುತ್ರ ಕಾಶಿನಾಥಯ್ಯ, ಸೊಸೆ ರತ್ನಪ್ರಭ ಹಾಗೂ ಮೊಮ್ಮಗಳು ಸಹನಾ ಕಣ್ಣಿರಿಟ್ಟಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಇಲ್ಲದನ್ನು ನೆನೆದು ತಂದೆ ಕಾಶಿನಾಥಯ್ಯ ಕಣ್ಣೀರಿಟ್ಟರು.
ರೇಣುಕಾಸ್ವಾಮಿ ಸತ್ತಾಗ ಮನಸ್ಸಿಗೆ ಘಾಸಿಯಾಗುತ್ತದೆ ಎಂದು ಅಜ್ಜಿಗೆ ವಿಚಾರ ಹೇಳಿರಲಿಲ್ಲ, ರೇಣುಕಾಸ್ವಾಮಿಯೇ ಅವರ ಅಜ್ಜಿಯ ಹಾರೈಕೆ ಮಾಡುತ್ತಿದ್ದ. ರೇಣುಕಾಸ್ವಾಮಿ ಮೇಲೆ ಅಜ್ಜಿಗೆ ವಿಶೇಷ ಪ್ರೀತಿ ಇತ್ತು, ಸ್ವಾಮಿ ಎಲ್ಲಿ ಹೋದ ಎಂದು ಯಾವಾಗಲೂ ಅಜ್ಜಿ ಕೇಳುತ್ತಿದ್ದರು ಎಂದು ನೆನೆದು ಕಣ್ಣೀರಿಟ್ಟರು. ಇನ್ನೂ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
PublicNext
18/06/2026 11:16 am
LOADING...