ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಗೊರ್ಲಕಟ್ಟೆ ಗ್ರಾಮದ ರೈತರು ಸಾವಿರಾರು ರೂಪಾಯಿ ಕೊಟ್ಟು ಪಂಚಗಂಗಾ ಕಂಪನಿ ಈರುಳ್ಳಿ ಬೀಜ ಬಿತ್ತಿದ್ದು, ಕಳಪೆ ಬೀಜ ವಿತರಣೆ ಮಾಡಿರುವ ಆರೋಪ ಕೇಳಿಬಂದಿದೆ.
ಗ್ರಾಮದಲ್ಲಿ ನೂರಾರು ರೈತರು ಈರುಳ್ಳಿಗೆ ಉತ್ತಮ ಬೆಲೆ ಬರುತ್ತೆ ಅಂತಾ ಸಾವಿರಾರು ರೂಪಾಯಿ ಹಣ ಕೊಟ್ಟು ಪಂಚಗಂಗಾ ಕಂಪನಿಯ ಈರುಳ್ಳಿ ಬೀಜ ಬಿತ್ತನೆಮಾಡಿದ್ದು, ಬೀಜ ಮೊಳಕೆಯೊಡೆಯದ ಹಿನ್ನೆಲೆ ಕಂಪನಿ ವಿರುದ್ಧ ರೈತರು ಬೇಸರ ಹೊರಹಾಕಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಬೀಜ,ಗೊಬ್ಬರ, ಹಾಗೂ ಕೀಟನಾಶಕಗಳ ಬೆಲೆ ಹೆಚ್ಚಾಗಿದೆ. ಕೂಲಿ ಆಳುಗಳ ಕೂಲಿ ಹೆಚ್ಚಾಗಿದೆ. ಉತ್ತಮ ಬೆಳೆ ಬಂದ್ರೆ ಉತ್ತಮ ಬೆಲೆ ಸಿಗಲ್ಲ, ಇನ್ನೊಂದೆಡೆ ಬೆಲೆ ಚನ್ನಾಗಿದ್ದಾಗ ಈ ರೀತಿ ಬೆಳೆ ಹಾಳಾಗುತ್ತೆ. ಈ ಸಮಸ್ಯೆ ಬಗ್ಗೆ ಈರುಳ್ಳಿ ಬೀಜದ ಕಂಪನಿಯವರಿಗೆ ವಿಚಾರಿಸಿದ್ರೆ ಸ್ಪಂದಿಸುತ್ತಿಲ್ಲ ಅಂತಾ ಆಕ್ರೋಶ ಹೊರಹಾಕಿದ್ದಾರೆ.
PublicNext
19/06/2026 10:04 pm
LOADING...