ಚಳ್ಳಕೆರೆ: ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪರಿಸರ ಸಮತೋಲನ ಕಾಪಾಡುವ ಕಾಳಜಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿ ರಾಜೇಶ್ ಹೇಳಿದರು.
ಚಳ್ಳಕೆರೆ ನಗರದ ಮಾಜಿ ಸೈನಿಕರ ಕನ್ನಡ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. 1972 ರಲ್ಲಿ ವಿಶ್ವ ಸಂಸ್ಥೆ ಪರಿಸರ ದಿನಾಚರಣೆ ಜಾರಿ ಮಾಡಲಾಗಿದೆ. ಆಹಾರ ಉತ್ಪಾದನೆ ಮತ್ತು ಜೀವ ಸಂಕುಲ ಉಳಿವಿಗಾಗಿ ಗಿಡಮರಗಳ ಸಂರಕ್ಷಣೆ ಅಗತ್ಯ ಇದೆ. ಪ್ರತಿಯೊಬ್ಬರಲ್ಲೂ ಪರಿಸರ ಪ್ರೇಮ ಬೆಳೆಯಬೇಕು. ಶಾಲಾ,ಕಾಲೇಜು ಆವರಣದಲ್ಲಿ ಗಿಡ ಬೆಳೆಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಪರಿಸರಕ್ಕೆ ಮನುಷ್ಯ ಅಗತ್ಯ ಇಲ್ಲ. ಆದರೆ, ಮನುಷ್ಯನಿಗೆ ಪರಿಸರ ಅಗತ್ಯ ಇದೆ. ಗಿಡ ವಿತರಣೆ ಮತ್ತು ಪರಿಸರ ಜಾಗೃತಿಗಾಗಿ ಮಕ್ಕಳ ಪ್ರವಾಸ ಕಾರ್ಯ ಇಲಾಖೆ ಮಾಡುತ್ತಿದೆ. ಇದನ್ನು ಶಾಲಾ ಸಂಸ್ಥೆಗಳ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಋಷಿ ಮುನಿಗಳ ಪರಂಪರೆಯಿಂದ ನಮ್ಮ ಸಮಾಜ ಬೆಳೆದು ಬಂದಿದೆ. ಅಡವಿ ವಾಸಿಗಳಾಗಿದ್ದ ಋಷಿಗಳಿಗೆ, ಪರಿಸರದ ಗಿಡಮೂಲೆಕೆಗಳು ವೈದ್ಯಕೀಯವಾಗಿ ಆರೋಗ್ಯ ಕಾಪಾಡಿವೆ. ಔಷಧಿ ಗುಣ ಮತ್ತು ಉಸಿರಾಟಕ್ಕೆ ಆಮ್ಲಜನಕ ನೀಡುವ ಪ್ರಕೃತಿಯನ್ನು ಪೋಷಣೆ ಮಾಡಬೇಕು .
Kshetra Samachara
14/06/2026 06:00 pm
LOADING...