ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೊರ ರಾಜ್ಯದ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟ ಆರ್‌ಟಿಒ ಅಧಿಕಾರಿಗಳು

ಧಾರವಾಡ: ಹೊರ ರಾಜ್ಯಗಳ ಪಾಸಿಂಗ್ ಇರುವ ವಾಹನಗಳನ್ನು ಕರ್ನಾಟಕದ ಜನ ಹೆಚ್ಚು ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಅವುಗಳ ಮೇಲಿರುವ ಸುಂಕವನ್ನು ಪರಿಶೀಲನೆ ಮಾಡಲು ಆರ್‌ಟಿಒ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ಮಹಾರಾಷ್ಟ್ರ, ಪಾಂಡಿಚೇರಿ, ಗೋವಾ, ಆಂಧ್ರಪ್ರದೇಶ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಂದ ಕರ್ನಾಟಕದ ಜನ ದರ ಕಡಿಮೆಯಾಗುತ್ತದೆ ಎಂದು ಅಲ್ಲಿನ ವಾಹನಗಳನ್ನು ಖರೀದಿ ಮಾಡಿ ಇಲ್ಲಿಗೆ ತರುತ್ತಿದ್ದಾರೆ.

ಅಂತಹ ವಾಹನಗಳ ಮೇಲೆ ನಿಗಾ ಇಟ್ಟಿರುವ ಆರ್‌ಟಿಒ ಅಧಿಕಾರಿಗಳು ಅವುಗಳ ಮೇಲಿನ ಸುಂಕ ತಪಾಸಣೆ ಮಾಡುತ್ತಿದ್ದಾರೆ. ಪಾಂಡಿಚೇರಿ ಮೂಲದ ವಾಹನಗಳ ಮೇಲೆ ಈಗ ಅತೀ ಹೆಚ್ಚು ಕೇಸ್‌ಗಳು ಪತ್ತೆಯಾಗಿವೆ. ಹುಬ್ಬಳ್ಳಿ, ಧಾರವಾಡ ಅವಳಿನಗರಗಳಲ್ಲೂ ಹೊರ ರಾಜ್ಯದ ಪಾಸಿಂಗ್ ಇರುವ ವಾಹನಗಳು ಓಡಾಡುತ್ತಿದ್ದು, ಅವುಗಳ ಮೇಲಿನ ಸುಂಕ ತಪಾಸಣೆ ನಡೆಸಲು ಆರ್‌ಟಿಒ ಅಧಿಕಾರಿಗಳು ರಸ್ತೆಗಿಳಿದಿದ್ದಾರೆ.

ಒಟ್ಟು ಏಳು ಜಿಲ್ಲೆಗಳಲ್ಲಿ ಈ ರೀತಿ ಹೊರ ರಾಜ್ಯದ ಪಾಸಿಂಗ್ ಇರುವ ವಾಹನಗಳು ಓಡಾಡುತ್ತಿದ್ದು, ಸದ್ಯ 30 ಲಕ್ಷಕ್ಕೂ ಅಧಿಕ ಮೊತ್ತದ ದಂಡವನ್ನು ಆರ್‌ಟಿಒ ಅಧಿಕಾರಿಗಳು ಈ ವಾಹನಗಳಿಗೆ ವಿಧಿಸಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/06/2026 06:17 pm

Cinque Terre

29.83 K

Cinque Terre

2

ಸಂಬಂಧಿತ ಸುದ್ದಿ