ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಪಂದ್ಯಗಳು ಅಸಾಧ್ಯ - ವೆಂಕಟೇಶ್ ಪ್ರಸಾದ್ ಸ್ಪಷ್ಟನೆ!

ಬೆಳಗಾವಿ: ಬೆಳಗಾವಿ ಕ್ರಿಕೆಟ್ ಸ್ಟೆಡಿಯಂ ಸಂಬಂಧ ಕೇಳಿದ ಮಾಧ್ಯಮಗಳ ಪ್ರಶ್ನೆಗೆ ಕೆ ಎಸ್ ಸಿ ಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಗರಂ ಆಗಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಜ್ ಪಂದ್ಯಾವಳಿ ಲಾಂಚ್ ಮಾಡಿದ್ದೇವೆ.‌ ದ್ರಾವಿಡ್, ಕುಂಬ್ಳೆ ಸಹ ಪಾಲ್ಗೊಂಡಿದ್ದರು. ಹುಬ್ಬಳ್ಳಿ ಮಣ್ಣಿನ ಮಗ ಅವಿನಾಶ ವೈದ್ಯ BCCIಗೆ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ.‌ ಮಹಾರಾಜ್ ಟ್ರೋಫಿಗೆ ಇನ್ನಷ್ಟು ಹೆಚ್ಚು ತಂಡಗಳು ಆಡ್ ಮಾಡಬಹುದು ಎಂದರು.

ಬೆಳಗಾವಿ ಕೆ ಎಸ್ ಸಿ ಎ ಗ್ರೌಂಡ್ ಬಳಕೆಯಾದ ವಿಚಾರವಾಗಿ ಪತ್ರಕರ್ತರು ಪ್ರಶ್ನೆಗೆ ಗರಂ ಆದ ವೆಂಕಟೇಶ್ ಪ್ರಸಾದ್, ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಆಡಿಸಿದ್ದೇವೆ. ಯಾವುದೇ ರೀತಿಯಲ್ಲಿ ಕಲಬುರಗಿ, ರಾಯಚೂರು ಭೇದಭಾವ ಮಾಡಿಲ್ಲ. ಖಂಡಿತ ಮುಂದಿನ ದಿನಗಳಲ್ಲಿ ಬೆಳಗಾವಿಗೆ ಮ್ಯಾಚ್ ಬರುತ್ತೆ. ನಿಮ್ಮ ಪ್ರಶ್ನೆಯನ್ನು ಈ ಹಿಂದೆ ಇದ್ದ ಆಡಳಿತ ಮಂಡಳಿಗೆ ಕೇಳಬೇಕಿತ್ತು. ಬೆಳಗಾವಿಯಲ್ಲಿ ಇಂಟರ್‌ನ್ಯಾಷನಲ್ ಮ್ಯಾಚ್ ಆಡೋ ಹಾಗೇ ಮಾಡೋಕೆ ಆಗಲ್ಲ. ಪ್ರಾಕ್ಟೀಸ್ ಮ್ಯಾಚ್ ಆಡೋ ರೀತಿಯಲ್ಲಿ ಮಾಡಬಹುದು. ಬಿಸಿಸಿಐ ಡೊಮೆಸ್ಟಿಕ್ ಮ್ಯಾಚ್ ಆಡಿಸಬಹುದು ಎಂದರು.

Edited By :
PublicNext

PublicNext

13/06/2026 05:18 pm

Cinque Terre

12.96 K

Cinque Terre

0

ಸಂಬಂಧಿತ ಸುದ್ದಿ