ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಕರ್ನಾಟಕದ ಮಹಿಳೆಯರಿಗೂ ಕೇರಳ ಬಸ್ ನಲ್ಲಿ ಉಚಿತ ಪ್ರಯಾಣ...!

ಮಂಗಳೂರು : ಕೇರಳ ಯುಡಿಎಫ್ ಸರಕಾರದ ಮಹತ್ವಾಕಾಂಕ್ಷಿ 'ಪ್ರಿಯದರ್ಶಿನಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯಕ್ಕೆ ಸೋಮವಾರ ಬೆಳಿಗ್ಗೆ ಉಪ್ಪಳ ಬಸ್ಸು ನಿಲ್ದಾಣದಲ್ಲಿ ಮಂಜೇಶ್ವರ ಶಾಸಕ ಎ . ಕೆ. ಎಂ ಅಶ್ರಫ್ ಚಾಲನೆ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಜೆ. ಸೋಮಶೇಖರ ಸೇರಿದಂತೆ ಇನ್ನಿತರ ಯುಡಿಎಫ್ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

ತಿರುವನಂತಪುರದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿ. ಡಿ ಸತೀಶನ್ ಮಹಿಳಾ ಪ್ರಯಾಣಿಕರೊಬ್ಬರಿಗೆ 'ಶೂನ್ಯ' ದರದ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಿದರು. ಸಾರಿಗೆ ಸಚಿವ ಸಿ. ಪಿ ಜಾನ್ ಮೊದಲಾದವರು ಉಪಸ್ಥಿತರಿದ್ದರು.

ಕಾಸರಗೋಡು ಜಿಲ್ಲೆಯ 114 ಬಸ್ಸುಗಳಲ್ಲಿ ಇದರ ಪ್ರಯೋಜನ ಲಭಿಸುತ್ತಿದ್ದು, ಮೊದಲ ಹಂತದಲ್ಲಿ ಕೇವಲ ಕೆಎಸ್ಸಾರ್ಟಿಸಿ ಸಾಮಾನ್ಯ ( ಆರ್ಡಿನರಿ) ಬಸ್ಸುಗಳು, ಟೌನ್ - ಟು -ಟೌನ್ ಮತ್ತು ಲಿಮಿಟೆಡ್ ಸ್ಟಾಪ್ ಆರ್ಡಿನರಿ ಬಸ್ಸುಗಳಲ್ಲಿ ಮಾತ್ರ ಈ ಸೌಲಭ್ಯ ಸಿಗಲಿದೆ. ಫಾಸ್ಟ್ ಪ್ಯಾಸೆಂಜರ್, ಸೂಪರ್ ಫಾಸ್ಟ್ ಅಥವಾ ಎಕ್ಸ್ ಪ್ರೆಸ್ ಗಳಲ್ಲಿ ಸದ್ಯಕ್ಕೆ ಈ ಸೌಲಭ್ಯ ಅನ್ವಯಿಸುವುದಿಲ್ಲ. ಕರ್ನಾಟಕದ ಮಹಿಳೆಯರಿಗೂ ಕೇರಳ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಬಹುದು ದಿನ ನಿತ್ಯ ಕಾಸರಗೋಡಿನಿಂದ ಮಂಗಳೂರು ಕಡೆಗೆ ಬರುವ ಮಹಿಳೆಯರು, ವಿದ್ಯಾರ್ಥಿನಿಗಳಿಗೆ ಈ ಯೋಜನೆ ಅನುಕೂಲಕರವಾಗಿದೆ.

Edited By : Shivu K
PublicNext

PublicNext

15/06/2026 04:09 pm

Cinque Terre

3.09 K

Cinque Terre

0

ಸಂಬಂಧಿತ ಸುದ್ದಿ