ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕುಮಾರಕೃಪಾ ಗೆಸ್ಟ್ ಹೌಸ್ ನ ಇಂಚಿಂಚು ಮಾಹಿತಿ 'ಪಬ್ಲಿಕ್ ನೆಕ್ಸ್ಟ್'ನಲ್ಲಿ ಮಾತ್ರ!

ಬೆಂಗಳೂರು: ದೇವರು ಮತ್ತು ವಾಸ್ತು ಮೇಲೆ ಅಪಾರ ನಂಬಿಕೆ ಹೊಂದಿರುವ ನೂತನ ಸಿಎಂ ಡಿ.ಕೆ.ಶಿವಕುಮಾರ್ ಅವರು ಕುಮಾರಕೃಪಾ ಅತಿಥಿಗೃಹವನ್ನೇ ತಮ್ಮ ಮುಖ್ಯಮಂತ್ರಿಗಳ ನಿವಾಸವನ್ನಾಗಿ ಮಾಡಿಕೊಳ್ಳಲು ಮುಂದಾಗಿರೋದು ಎಲ್ಲರ ಹುಬ್ಬೇರುವಂತೆ ಮಾಡಿದೆ! ಹಳೆಯ ಮತ್ತು ಪಾರಂಪರಿಕ ಕಟ್ಟಡವೆನ್ನಿಸಿದ ಕೆಕೆ ಗೆಸ್ಟ್ ಹೌಸ್ ಅನ್ನು ವಾಸ್ತುವಿನ ನೆಪದಲ್ಲಿ ಸರ್ಕಾರ ಒಡೆಯೋದು ಸರಿಯಲ್ಲ ಅಂತಾ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆಕ್ಷೇಪ ಎತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಬಂಧಿಸಿದ ಅಧಿಕಾರಿಗಳು ಕೆಕೆ ಗೆಸ್ಟ್ ಹೌಸ್ ಅನ್ನು ಒಡೆಯಲ್ಲ. ಬದಲಾಗಿ ಸಣ್ಣ-ಪುಟ್ಟ ಬದಲಾವಣೆಯೊಂದಿಗೆ ರಿನೋವೇಶನ್ ಮಾಡಲಾಗುತ್ತಿದೆ ಎನ್ನುತ್ತಾರೆ. ಈ ಸಂದರ್ಭದಲ್ಲಿ ಕೆಕೆ ಗೆಸ್ಟ್ ಹೌಸ್ ನ ಒಳಗೆ ಹೋಗಿ ಪಬ್ಲಿಕ್ ನೆಕ್ಸ್ಟ್ ವೀಕ್ಷಕರಿಗಾಗಿ ಸತ್ಯಾಂಶ ಏನು? ಅಂತಾ ತೆರೆದಿಡುವ ಪ್ರಯತ್ನ ಮಾಡಿದೆ. ನಮ್ಮ ಪ್ರತಿನಿಧಿ ಚೆನ್ನವೀರ ಸಗರನಾಳ್ ಅವರು ಕಟ್ಟಿ ಕೊಟ್ಟಂಥ ಸಚಿತ್ರ ವಿಶೇಷ ವರದಿ ಇಲ್ಲಿದೆ.

Edited By :
PublicNext

PublicNext

15/06/2026 08:42 pm

Cinque Terre

14.22 K

Cinque Terre

0

ಸಂಬಂಧಿತ ಸುದ್ದಿ