ಬ್ರಹ್ಮಾವರ: ಬಾರಕೂರು ಮಹಾತೋಭಾರ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಪ್ರಶ್ನಾಚಿಂತನೆಯಲ್ಲಿ ಕಂಡುಬಂದ ದೋಷ ಪ್ರಾಯಶ್ಚಿತ್ತ ಮುಗಿಸಿ ಧಾರ್ಮಿಕ ದತ್ತಿ ಇಲಾಖೆಯಿಂದ ಜೀರ್ಣೋದ್ಧಾರಕ್ಕೆ ಅನುಮತಿ ಪಡೆದು ಜೀರ್ಣೋದ್ಧಾರದ ಮೊದಲ ಹಂತದ ಆರಂಭವಾಗಿ ಜೂನ್ 17ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮಧ್ಯಾಹ್ನದ ಮಹಾಪೂಜೆ ಬಳಿಕ ಸಾರ್ವಜನಿಕರಿಂದ ಮುಷ್ಠಿಕಾಣಿಕೆ ಸಮರ್ಪಣೆ ಹಾಗೂ ಮನವಿ ಪತ್ರ ಬಿಡುಗಡೆ ಜರುಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಸೋಮವಾರ ದೇವಸ್ಥಾನದ ಕಚೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತುಳುನಾಡ ಸೀಮೆಯ ಅಧಿದೇವರು ಎನಿಸಿಕೊಂಡ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತೀರಾ ಅಜೀರ್ಣಾವಸ್ಥೆಯಲ್ಲಿರುವುದನ್ನು ಮನಗಂಡು ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ ಈಗಾಗಲೇ ರಾಜ್ಯದ ಮುಜರಾಯಿ ಸಚಿವರು, ಪ್ರವಾಸೋದ್ಯಮ ಸಚಿವರು ನಾನಾ ದಾನಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ರಾವ್, ಅಳುಪ ರಾಜವಂಶದ ಡಾ.ಆಕಾಶ್ ರಾಜ್ ಜೈನ್, ಧಾರ್ಮಿಕ ಚಿಂತಕ ದಾಮೋದರ ಶರ್ಮ, ಸಮಿತಿಯ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಶ್ರೀನಿವಾಸ ಶೆಟ್ಟಿ,ರಾಮಚಂದ್ರ ಕಾಮತ್,ಚಂದ್ರಶೇಖರ ಶೆಟ್ಟಿ ನಡುಮನೆ, ಜನಾರ್ದನ ದೇವಾಡಿಗ ಸುದ್ದಿಗೋಷ್ಠಿಯಲ್ಲಿದ್ದರು.
PublicNext
16/06/2026 07:47 am
LOADING...