ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕ ರಾಜ್ಯ ಲಾಂಛನ ಗಂಡಬೇರುಂಡ ತುಳುನಾಡಿನ ನಡಿಬೆಟ್ಟು ಗುತ್ತು ಮನೆಯ ಕಂಬದಲ್ಲಿ..!

ಉಡುಪಿ : ಒಂದು ಕಾಲದಲ್ಲಿ ಈ ಗುತ್ತು ಮನೆಯ ಅಧೀನದಲ್ಲಿ ಸುಮಾರು 2,500 ಎಕರೆ ಭೂಮಿ ಇತ್ತು ಎನ್ನಲಾಗುತ್ತದೆ. ಆ ಕಾಲಘಟ್ಟದಲ್ಲಿ ಈ ಮನೆ ಕೇವಲ ವಾಸಸ್ಥಳವಾಗಿರದೆ, ಊರಿನ ಆಡಳಿತ, ನ್ಯಾಯ ತೀರ್ಮಾನ ಹಾಗೂ ಧಾರ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು.

ಗ್ರಾಮದ ಜನರಿಗೆ ಯಾವುದೇ ಸಮಸ್ಯೆ ಎದುರಾದರೆ, ಅದಕ್ಕೆ ನ್ಯಾಯಯುತ ತೀರ್ಮಾನವನ್ನು ಈ ಮನೆಯಲ್ಲೇ ಕೈಗೊಳ್ಳಲಾಗುತ್ತಿತ್ತು. ಇಂತಹ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತಿದ್ದ ನಡಿಬೆಟ್ಟು ಗುತ್ತು ಮನೆ, ಗ್ರಾಮೀಣ ಆಡಳಿತ ವ್ಯವಸ್ಥೆಯ ಪ್ರಮುಖ ಅಂಗವಾಗಿತ್ತು.

ಇಂದಿಗೂ ಹಲವು ಸಂಪ್ರದಾಯಗಳು ಮುಂದುವರಿದಿವೆ. ಊರಿನ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೊದಲ ಪ್ರಸಾದವನ್ನು ಈ ಮನೆಯ ಕುಟುಂಬಸ್ಥರಿಗೆ ನೀಡುವ ಪದ್ಧತಿ ಈಗಲೂ ಆಚರಣೆಯಲ್ಲಿದೆ. ದೈವ-ದೇವರುಗಳ ಪೂಜೆ ಹಾಗೂ ಇತರ ಸಂಪ್ರದಾಯಗಳೂ ನಿರಂತರವಾಗಿ ನಡೆಯುತ್ತಿವೆ.

ಈ ಮನೆಗೆ ಪ್ರವೇಶಿಸಲು 9 ಮೆಟ್ಟಿಲುಗಳನ್ನು ಏರಬೇಕು. ವಿಶೇಷವಾಗಿ ಮೊದಲ ಮೆಟ್ಟಿಲನ್ನು ಪಾಪನಾಶಿನಿ ನದಿ ಸ್ಪರ್ಶಿಸುವ ದಿನವನ್ನು ಶುಭದಿನವೆಂದು ಪರಿಗಣಿಸಿ ಬಾಗಿನ ಬಿಡುವ ಆಚರಣೆ ನಡೆಯುತ್ತದೆ

ಪೂರ್ಣವಾಗಿ ವಾಸ್ತುಶಾಸ್ತ್ರದ ಆಧಾರದ ಮೇಲೆ ನಿರ್ಮಿಸಲಾದ ಈ ಮನೆ, ಆ ಕಾಲದ ನಿರ್ಮಾಣ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಆಡಳಿತ ನಡೆಸುತ್ತಿದ್ದ ಅರಸರು ಕುಳಿತುಕೊಳ್ಳುತ್ತಿದ್ದ ಐತಿಹಾಸಿಕ ಕುರ್ಚಿಯೂ ಇಂದಿಗೂ ಸಂರಕ್ಷಿತವಾಗಿದೆ.

ಈ ಮನೆಯ ವಿನ್ಯಾಸ ಎಷ್ಟು ವೈಜ್ಞಾನಿಕವಾಗಿದೆ ಎಂದರೆ, ಮಧ್ಯಾಹ್ನದ ತೀವ್ರ ಬಿಸಿಲಿನ ಸಮಯದಲ್ಲಿಯೂ ಮನೆಯ ಒಂದು ನಿರ್ದಿಷ್ಟ ಸ್ಥಳದಲ್ಲಿ ಕುಳಿತರೆ ತಂಪಾದ ಗಾಳಿ ಅನುಭವವಾಗುತ್ತದೆ

ಈ ಗುತ್ತು ಮನೆಯವರು ನಡೆಸಿಕೊಂಡು ಬಂದಿರುವ ನಡಿಬೆಟ್ಟು ಕಂಬಳ ಇಂದಿಗೂ ತನ್ನ ಪಾರಂಪರಿಕ ವೈಭವದೊಂದಿಗೆ ಸಾಗುತ್ತಿದೆ.

Edited By : Shivu K
PublicNext

PublicNext

20/06/2026 06:02 pm

Cinque Terre

7.45 K

Cinque Terre

0

ಸಂಬಂಧಿತ ಸುದ್ದಿ