ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತದ ಶ್ರೀ ವ್ಯಾಸಮಹರ್ಷಿ ಸಂಸ್ಕೃತ ವೇದಪಾಠ ಶಾಲೆಯ ಅಧ್ಯಾಪಕರಾದ ಕಾಗಾಲ್ ನವೀನ್ ಜನಾರ್ದನ ಭಟ್ಟ ರವರು ಸಂಪಾದಿಸಿದ ತಂತ್ರಸಾರೋಕ್ತ ಶ್ರೀ ವಿಷ್ಣು ಪೂಜಾ ದೀಪಿಕಾ ಎಂಬ ಗ್ರಂಥವನ್ನು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀದೇವರಿಗೆ ಸಮರ್ಪಿಸುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.
ಗೌಡ ಸಾರಸ್ವತ ಬ್ರಾಹ್ಮಣ ವೈದಿಕರಿಗೆ ದೇವ ಪೂಜೆಗೆ ಅಗತ್ಯವಿರುವ ವಿವಿಧ ಶಾಸ್ತ್ರ ನಿರ್ಣಯಗಳನ್ನು ಈ ಗ್ರಂಥವು ಒಳಗೊಂಡಿದೆ. ಈ ಸಂದರ್ಭ ಶ್ರೀ ಕ್ಷೇತ್ರದ ದೇವದರ್ಶನ ಪಾತ್ರಿ ಪಿ.ಸತ್ಯನಾರಾಯಣ ನಾಯಕ್, ಶ್ರೀಕ್ಷೇತ್ರದ ಪರ್ಯಾಯ ಅರ್ಚಕ ಸಂಪಿಗೆ ಮನೆ ವಿಶ್ವನಾಥ ಭಟ್, ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ಭಟ್, ವೇದಮೂರ್ತಿ ಪದ್ಮನಾಭ ಭಟ್, ಶ್ರೀಕ್ಷೇತ್ರದ ಪ್ರಬಂಧಕ ನಾಗೇಶ್ ಪೈ, ಗ್ರಂಥಕರ್ತ ಕಾಗಾಲ್ ನವೀನ್ ಜನಾರ್ದನ ಭಟ್ ಉಪಸ್ಥಿತರಿದ್ದರು.
Kshetra Samachara
18/06/2026 04:51 pm
LOADING...