ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಬಾರಕೂರು ಕೋಟೇಕೇರಿ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮುಷ್ಠಿಕಾಣಿಕೆ ಸಮರ್ಪಣೆ

ಬ್ರಹ್ಮಾವರ: ಬಾರಕೂರು ಕೋಟೇಕೇರಿ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮುಷ್ಠಿಕಾಣಿಕೆ ಸಮರ್ಪಣೆ ಮತ್ತು ಮನವಿಪತ್ರ ಬಿಡುಗಡೆ ಕಾರ್ಯಕ್ರಮಬುಧವಾರ ಜರುಗಿತು.

ಗಣಹೋಮ, ರೇವಂತ ಸ್ವಾಮಿ ಪೂಜೆ ಬಳಿಕ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಪೂಜೆ ಜರುಗಿತು. ಪರಿಸರದ ಎಲ್ಲಾ ದೇವಸ್ಥಾನದ ಆಡಳಿತ ಮಂಡಳಿಯವರು,10 ಕೇರಿಗಳ ತುಳುನಾಡ ಪ್ರಾಂತ್ಯದ ಸಾವಿರ ಸೀಮೆಯ ಅಧಿ ದೇವರು ಎನಿಸಿದ ದೇವಸ್ಥಾನದ ನಾನಾ ನಾನಾ ಭಾಗದ ಭಕ್ತರು ಸಾಗರೋಪಾದಿಯಲ್ಲಿ ಬಂದು ಮುಷ್ಠಿಕಾಣಿಕೆ ಸಮರ್ಪಿಸಿದರು.

ಅನೇಕರು ಮನೆಯಲ್ಲಿ ಸಂಗ್ರಹಿಸಿಟ್ಟ ಹಣವನ್ನು ಮುಷ್ಠಿಯಲ್ಲಿ ದೇವಸ್ಥಾನದ ಎದುರು ಭಾಗದಲ್ಲಿ ಇರಿಸಲಾದ ಭಂಡಾರಕ್ಕೆ ಸುರಿದರು ಇನ್ನು ಕೆಲವರು ದೇವಸ್ಥಾನದಲ್ಲಿ ನಾಣ್ಯಗಳನ್ನು ವ್ಯವಸ್ಥೆ ಗೊಳಿಸಿದ್ದು ಅದನ್ನು ಭಕ್ತಿ ಪೂರ್ವಕವಾಗಿ ದೇವರಿಗೆ ಅರ್ಪಿಸಿದರು.

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ವಿಠಲ್ ಹೆಗ್ಡೆ, ಆನಂದ ಸಿ ಕುಂದರ್, ಆಕಾಶ್ ರಾಜ್ ಜೈನ್, ಆಡಳಿತ ಮೋಕ್ತೇಸರ ಮಂಜುನಾಥ್ ರಾವ್, ಕಾರ್ಯಾಧ್ಯಕ್ಷ ಬಾರಕೂರು ಶಾಂತರಾಮ ಶೆಟ್ಟಿ, ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಉಪಾಧ್ಯಕ್ಷರಾದ ಚಂದ್ರ ಶೇಖರ ಶೆಟ್ಟಿ ನಡುಮನೆ, ಶ್ರೀನಿವಾಸ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ ಖಜಾಂಚಿ ಭಾರತೀ ರಾಮಚಂದ್ರ ಕಾಮತ್ ಇನ್ನಿತರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

17/06/2026 08:23 pm

Cinque Terre

2.97 K

Cinque Terre

0

ಸಂಬಂಧಿತ ಸುದ್ದಿ