ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪುನಃ ಅರ್ಜಿ ಕೊಡೋದು ಒಳ್ಳೆಯದೇ.. ಆದರೆ, ಸರ್ಕಾರದ್ದು ತಪ್ಪಿದೆ!

ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವಾಗಲೇ ಸಂಬಂಧಪಟ್ಟವರು ಸರಿಯಾಗಿ ಯೋಚಿಸಿ ಮಾಡಬೇಕಾಗಿತ್ತು. ಆದರೆ, ಯೋಜನೆ ಜಾರಿಯಾಗಿ ಮೂರು ವರ್ಷಗಳ ಬಳಿಕ ಹೀಗೆ ಪುನಃ ಅರ್ಜಿ ಸಲ್ಲಿಸಬೇಕೆಂದು ಹೇಳೋದು ಸರಿಯಲ್ಲ..

'ಗೃಹಲಕ್ಷ್ಮೀ' ಯಲ್ಲಿ ಕೆಲ ಲೋಪಗಳಿದ್ದು, ಅದನ್ನೆಲ್ಲ ಸರಿಪಡಿಸಲು ಮತ್ತೆ ಅರ್ಜಿ ಕೊಡೋದು ಒಳ್ಳೆಯದೇ.. ರಾಜಕೀಯದವರು ಚೇಂಜ್ ಆದರೆ ನಾವೇನು ಮಾಡಬೇಕು? ಗ್ಯಾರಂಟಿ ಹಣ ಬಂದರೆ ಬರಲಿ ಬಾರದಿದ್ದರೆ ಹೋಗಲಿ.. ಇದು ಗ್ಯಾರಂಟಿ ಯೋಜನೆಗಳಿಗಾಗಿ ಪುನಃ ಅರ್ಜಿ ಸಲ್ಲಿಸಬೇಕೆಂಬ ಸರ್ಕಾರದ ನಿರ್ಧಾರಕ್ಕೇ ಜನರಿಂದ ಕೇಳಿ ಬಂದಂಥ ಅಭಿಪ್ರಾಯ. ಇತ್ತೀಚೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ 'ಪಬ್ಲಿಕ್ ನೆಕ್ಸ್ಟ್' ಕೆಲವರನ್ನು ಕಂಡು ಮಾತನಾಡಿಸಿದಾಗ ಕೇಳಿ ಬಂದಂಥ ವಿಭಿನ್ನ ಅಭಿಪ್ರಾಯಗಳ ಸಾರ ಇಲ್ಲಿದೆ.

Edited By :
PublicNext

PublicNext

17/06/2026 03:03 pm

Cinque Terre

11.19 K

Cinque Terre

0

ಸಂಬಂಧಿತ ಸುದ್ದಿ