ಮಂಗಳೂರು: ಮಹಾನಗರ ಪಾಲಿಕೆಯಿಂದ ಸರಬರಾಜು ಆಗುತ್ತಿರುವ ನೀರು ಸೇವಿಸಿ ಬಿಜೈ ನ್ಯೂ ರಸ್ತೆ, ಬಟ್ಟಗುಡ್ಡೆ ಸೇರಿದಂತೆ ಕೆಲ ಪ್ರದೇಶಗಳ ನೂರಕ್ಕೂ ಅಧಿಕ ಮಂದಿಗೆ ವಾಂತಿಬೇಧಿ ಸಹಿತ ಆನಾರೋಗ್ಯ ಕಾಣಿಸಿಕೊಂಡಿದೆ. ಇದೀಗ ಈ ನೀರು ಸೇವನೆಗೆ ಯೋಗ್ಯವಲ್ಲ ಎಂಬ ವರದಿ ಬಂದಿದೆ.
ಕಳೆದೊಂದು ತಿಂಗಳಿನಿಂದ ಇಲ್ಲಿನ ಮಕ್ಕಳು ಸಹಿತ 100ಕ್ಕೂ ಅಧಿಕ ಮಂದಿಗೆ ಪದೇ ಪದೇ ಅನಾರೋಗ್ಯ ಕಾಣುತ್ತಿತ್ತು. ಆರಂಭದಲ್ಲಿ ಬಾವಿ ನೀರು ಪರೀಕ್ಷೆ ಮಾಡಲಾಗಿ ಕುಡಿಯುಲು ಯೋಗ್ಯವಲ್ಲ ಎಂದು ವರದಿ ಬಂದಿತ್ತು. ಆ ಬಳಿಕವೂ ಮಕ್ಕಳಲ್ಲಿ ಅನಾರೋಗ್ಯ ವಾಂತಿ ಬೇಧಿ ಕಡಿಮೆಯಾಗಿರಲಿಲ್ಲ. ಪಾಲಿಕೆ ಪೂರೈಸುತ್ತಿದ್ದ ನೀರನ್ನು ಗಮನಿಸಿದಾಗ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಕೈ ಸೇರಿದೆ.
ನಗರದ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಒಳಚರಂಡಿ ಪೈಪ್‌ಲೈನ್‌ಗಳನ್ನು ಜತೆಯಾಗಿಯೇ ಅಳವಡಿಸಲಾಗಿದೆ. ಇತ್ತೀಚೆಗೆ ನಡೆದ ಕಾಮಗಾರಿಗಳಿಗಾಗಿ ಅಗೆದ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್‌ಗೆ ಹಾನಿಯಾಗಿ ನೀರು ಕಲುಷಿತವಾಗುತ್ತಿದೆ ಎಂಬ ಸಂಶಯ ವ್ಯಕ್ತವಾಗಿದೆ.
ಈ ಬಗ್ಗೆ ಶಾಸಕ ವೇದಾವ್ಯಾಸ್ ಕಾಮತ್ ಅವರು ಪ್ರತಿಕ್ರಿಯಿಸಿದ್ದು, ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಈ ರೀತಿ ಘಟನೆಗಳಾಗುತ್ತಿವೆ. ಪಾಲಿಕೆ ಚುನಾವಣೆ ಮಾಡದೆ ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ತಕ್ಷಣ ನೀರು ಕಲುಷಿತವಾಗಲು ಕಾರಣ ಪತ್ತೆ ಹಚ್ಚಿ ಪರಿಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Kshetra Samachara
18/06/2026 10:27 pm
LOADING...