ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ:ಬಾಲಕರ ಬಾಲಮಂದಿರಕ್ಕೆಭೇಟಿ ನೀಡಿದ: ಎಸಿ ಚಂದ್ರಶೇಖರ್

ಶಿರಸಿ: ನಗರದ ಬಾಲಕರ ಬಾಲಮಂದಿರಕ್ಕೆ ಜೂನ್ 20ರಂದು ಶನಿವಾರ ಶಿರಸಿ ವಿಭಾಗದ ಸಹಾಯಕ ಆಯುಕ್ತರಾದ ಚಂದ್ರಶೇಖರ್ ಆರ್ ಜಿ ಅವರು ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ವಿದ್ಯಾರ್ಥಿಗಳ ಚಲನ ವಲನದ ಮೇಲೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಲ್ಲಿನ ಸಿಬ್ಬಂದಿಗಳಿಗೆ ಮಕ್ಕಳ ಆರೋಗ್ಯದ ತಪಾಸಣೆ ,ಊಟದ ವ್ಯವಸ್ಥೆ ಹಾಗೂ ಇನ್ನಿತರ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡು ಮಕ್ಕಳ ಯೋಗ ಕ್ಷೇಮದ ಕುರಿತು ಅಗತ್ಯವಾದ ಕೆಲವು ಮಹತ್ವದ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು.

Edited By : PublicNext Desk
Kshetra Samachara

Kshetra Samachara

20/06/2026 02:50 pm

Cinque Terre

800

Cinque Terre

0

ಸಂಬಂಧಿತ ಸುದ್ದಿ