ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪ: ಅಬ್ಬಿಕಲ್ಲು ಜಲಪಾತದಲ್ಲಿ ವರುಣದೇವನ ರೌದ್ರನರ್ತನ!

ಕೊಪ್ಪ: ಮಲೆನಾಡಿನಲ್ಲಿ ಕಳೆದ ಎರಡು ದಿನಗಳಿಂದ ವರುಣದೇವ ಅಬ್ಬರಿಸುತ್ತಿದ್ದು ಕೊಪ್ಪ ತಾಲೂಕಿನ ಪ್ರಸಿದ್ಧ ಅಬ್ಬಿಕಲ್ಲು ಜಲಪಾತ ಸದ್ಯ ರೌದ್ರಾವತಾರ ತಳೆದಿದೆ. ಸದಾ ಹಾಲ್ನೊರೆಯಂತೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಈ ಜಲಪಾತ, ಈಗ ಮಳೆಯ ಆರ್ಭಟಕ್ಕೆ ಕೆಸರು ಮಿಶ್ರಿತ ನೀರಿನಿಂದ ಮೈದುಂಬಿ ಭೋರ್ಗರೆಯುತ್ತಿದೆ.

ಮಲೆನಾಡಿನಾದ್ಯಂತ ಸತತ ಮಳೆಯಿಂದಾಗಿ ನದಿ ಮತ್ತು ಹಳ್ಳಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಅಬ್ಬಿಕಲ್ಲು ಜಲಪಾತವು ಮಲೆನಾಡಿನ ಪ್ರಾಕೃತಿಕ ವೈಭವವನ್ನು ಪರಿಚಯಿಸುವ ಸುಂದರ ತಾಣವಾಗಿದ್ದು ದಟ್ಟವಾದ ಅರಣ್ಯ, ಕಾಫಿ ಮತ್ತು ಅಡಿಕೆ ತೋಟಗಳ ನಡುವೆ ಹಾದುಹೋಗುವ ದಾರಿಯು ಪ್ರವಾಸಿಗರಿಗೆ ಹಿತಕರ ಅನುಭವವನ್ನು ನೀಡುತ್ತಿದೆ.

Edited By :
Kshetra Samachara

Kshetra Samachara

20/07/2026 12:08 pm

Cinque Terre

2.5 K

Cinque Terre

0

ಸಂಬಂಧಿತ ಸುದ್ದಿ