ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಆಗಸ್ಟ್ 6 ಮತ್ತು 9 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ !

ಚಿಕ್ಕಮಗಳೂರು : ಗ್ರಾಮೀಣ ಭಾಗದಲ್ಲಿ ಹೊಸ 11 KV ಇಂಡಸ್ಟ್ರಿಯಲ್ ಫೀಡರ್ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ, ಆಗಸ್ಟ್ 6 ಮತ್ತು 9 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.

ಹಿರೇಮಗಳೂರು 66/11 KV ವಿದ್ಯುತ್ ವಿತರಣಾ ಕೇಂದ್ರದ ಸ್ವಾಮ್ಯಕ್ಕೆ ಒಳಪಡುವ 11 KV ಇಂಡಸ್ಟ್ರಿಯಲ್ ಫೀಡರ್, 11 KV ಕೆ.ಆರ್ ಪೇಟೆ ಹಾಗೂ 11 KV ವಸ್ತಾರೆ ಫೀಡರ್‌ಗಳಲ್ಲಿ ತುರ್ತು ಕಾಮಗಾರಿಗಾಗಿ ಮಾರ್ಗ ಮುಕ್ತತೆ ನೀಡಲಾಗುತ್ತಿರುವುದರಿಂದ ಈ ವಿದ್ಯುತ್ ತಡೆ ಅನಿವಾರ್ಯವಾಗಿದೆ.

ಈ ಅವಧಿಯಲ್ಲಿ ಅಂಬಳೆ ಇಂಡಸ್ಟ್ರಿಯಲ್ ಏರಿಯಾ, ಸಿರ್ಗಾಪುರ, ಮಳಲೂರು, ಗಂಜಲಗೋಡು, ಬಾಣಾವರ, ವಸ್ತಾರೆ, ಬಾಚಿಗನಹಳ್ಳಿ, ಕೂದುವಳ್ಳಿ, ಕೋಡುವಳ್ಳಿ, ಹಲಸುಮನೆ, ಹಚಡಮನೆ, ಕಲ್ಲುಗುಡ್ಡೆ, ಅಂಬಳೆ, ಗೌಡನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕರು ಹಾಗೂ ಕೈಗಾರಿಕಾ ಗ್ರಾಹಕರು ಈ ಸಮಸ್ಯೆಗೆ ಸಹಕರಿಸಬೇಕೆಂದು ಮೆಸ್ಕಾಂ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Edited By : PublicNext Desk
PublicNext

PublicNext

05/08/2026 09:02 pm

Cinque Terre

2.81 K

Cinque Terre

0

ಸಂಬಂಧಿತ ಸುದ್ದಿ