ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಬಿತ್ತನೆಯಿಲ್ಲ, ಗೊಬ್ಬರವಿಲ್ಲ… ಗ್ರಾಮೀಣ ಭಾಗದ ಮಹಿಳೆಯರಿಗೆ ಆದಾಯ ತಂದ 'ಕರ್ಚಿಕಾಯಿ'

ಗದಗ: ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಅದೆಷ್ಟೋ ತರಕಾರಿಗಳು ಇಂದು ನಶಿಸಿ ಹೋಗಿವೆ. ಈ ಹಿಂದೆ ರೈತರು ಬೆಳೆಯುವ ಬೆಳೆಗಳ ಮಧ್ಯೆ ತಾವಾಗಿಯೇ ಬೆಳೆಯುತ್ತಿದ್ದ ಅನೇಕ ತರಕಾರಿಗಳು ಇಂದು ಎಲ್ಲಿಯೂ ಕಾಣುತ್ತಿಲ್ಲ. ಆದರೆ ಪ್ರತಿ ಮಳೆಗಾಲದಲ್ಲಿ ಈಗಲೂ ಕಾಣಸಿಗುವ ಕರ್ಚಿಕಾಯಿ ಅಪರೂಪದ ತರಕಾರಿ ಹಾಗೂ ಹಳ್ಳಿಗರಿಗೆ ಆದಾಯದ ಮೂಲವು ಹೌದು. ಗದಗ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರಾಶಿ ರಾಶಿ ಲೆಕ್ಕದಲ್ಲಿ ನೋಡಲು ಸಿಗುತ್ತದೆ. ಸಣ್ಣ ಹಾಗಲಕಾಯಿ ಆಕಾರದ ಅಪರೂಪದ ಔಷಧಿ ಗುಣಗಳನ್ನು ಹೊಂದಿರುವುದು ಕರ್ಚಿಕಾಯಿ ವಿಶೇಷ. ಕೊಬ್ಬಿನ ಅಂಶ, ಹೃದಯಾಘಾತ, ಆಸಿಡಿಟಿ, ಹಿಮೋಗ್ಲೋಬಿನ್ ಹೆಚ್ಚು ಉತ್ಪತ್ತಿಸುವ ಕರ್ಚಿಕಾಯಿಗೆ ಮಳೆಗಾಲದಲ್ಲಿ ಎಲ್ಲಿಲ್ಲದ ಬೇಡಿಕೆ.

ಅಡವಿ, ಹೊಲ, ಎರೆಮಣ್ಣಿನಲ್ಲಿ ಇದು ಬಿತ್ತನೆಯಿಲ್ಲದೆ, ಕುಂಟಿಯಿಲ್ಲದೆ, ಎಣ್ಣೆ-ಗೊಬ್ಬರವಿಲ್ಲದೆ ಹುಟ್ಟುತ್ತದೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಕಡೆ ಇದು ಆದಾಯದ ಮೂಲವು ಹೌದು. ಇದನ್ನು ಬಳ್ಳಿಯಿಂದ ಚೀಲಗಟ್ಟಲೇ ಬಿಡಿಸಿ ತಂದು ರಾಶಿ ಹಾಕಿ ಮಾರಾಟ ಮಾಡುತ್ತಾರೆ. ಮಹಿಳೆಯರು ಊರು ಊರಿಗೆ ಹೋಗಿ ತಲೆ ಮೇಲೆ ಹೊತ್ತು ಮಾರುತ್ತಾರೆ.

Edited By :
PublicNext

PublicNext

21/07/2026 01:43 pm

Cinque Terre

10.73 K

Cinque Terre

0

ಸಂಬಂಧಿತ ಸುದ್ದಿ