ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ ತಾಲ್ಲೂಕನ್ನು ಬರ‌ಪ್ರದೇಶ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ

ಗದಗ : ತಾಲ್ಲೂಕಿನ ಹುಲಕೋಟಿ ಗ್ರಾಮದಲ್ಲಿ ರಕ್ತ ಸಹಿ ಅಭಿಯಾನ ಮಾಡಲಾಯಿತು ರೈತರು ಮಹಿಳೆಯರು,ಯುವಕರು ಬದುಕಿಗಾಗಿ ರಕ್ತ ಸಹಿ ಮಾಡಿದರು.

ಗದಗ ತಾಲೂಕನ್ನು ತೀವ್ರ ಬರಪೀಡಿತ ಪ್ರಶವೆಂದು ಘೋಷಿಸಬೇಕು ತಕ್ಷಣ ರೈತರಿಗೆ ಬರ ಪರಿಹಾರ ನೀಡಬೇಕು. ಗದಗ ನಗರಕ್ಕೆ ಶಾಶ್ವತ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಗದಗ ನಗರ ಹಾಗೂ ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳನ್ನು ಗದಗ ಜಿಲ್ಲೆಯಲ್ಲಿ ಸ್ಥಾಪಿಸಬೇಕು. ರೈತರು ಮಹಿಳೆಯರು ಮತ್ತು ಯುವಕರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಜೆನ್ ಝೆಡ್ ಮತದಾರ ನಾಗರಿಕರ ವೇದಿಕೆಯ ಸದಸ್ಯರಾದ ಪರಮೇಶ ನಾಯಕ ಮಾತನಾಡಿ.

ನಮ್ಮ ಸಂಕಲ್ಪನಮ್ಮ ರಕ್ತದ ಪ್ರತಿಯೊಂದು ಹನಿಯೂ ದೇಶದ ಅಭಿವೃದ್ಧಿ ರೈತರ ರಕ್ಷಣೆ, ನೀರು ಹಾಗೂ ಉದ್ಯೋಗಕ್ಕಾಗಿ ಸಮರ್ಪಿತವಾಗಿದೆ. ಇಲ್ಲಿ ಪ್ರತಿ ನಾಗರಿಕರ ಸೇವಾ ಮನೋಭಾವ, ದೇಶಪ್ರೇಮ ಹಾಗೂ ಸಮಾಜದ ಮೇಲಿನ ಕಾಳಜಿ ಈ ಅಭಿಯಾನಕ್ಕೆ ಮತ್ತಷ್ಟು ಶಕ್ತಿ ತುಂಬಿದೆ.ಪ್ರತಿಯೊಬ್ಬರ ಅಮೂಲ್ಯ ಸಹಕಾರ ನಮ್ಮ ಸಮಾಜ ಸೇವೆಯ ಪಯಣಕ್ಕೆ ಸದಾ ಪ್ರೇರಣೆಯಾಗಿರಲಿ. ಬನ್ನಿ, ಎಲ್ಲರೂ ಕೈಜೋಡಿಸಿ ಈ ಅಭಿಯಾನವನ್ನು ಇನ್ನಷ್ಟು ಯಶಸ್ವಿಗೊಳಿಸೋಣ ಎಂದು ಅವರು ಕೋರಿದರು.

ಈ ಸಂಧರ್ಬದಲ್ಲಿ ವೆಂಕಟೇಶ ಸೂರಣಗಿ,ಬಾಬಣ್ಣ ಅಣ್ಣಿಗೇರಿ, ಮೋಹನ, ಮಂಜುನಾಥ್ ಸೂಗಿನಿ, ಬಿ. ಐ. ಕೂರಿ, ಪಾಂಡು ಹುಲಿ, ಕಲ್ಲಪ್ಪ ಮಂಜುನಾಥ, ಮೋಹನ ಕೋರಿ, ಮಂಜುನಾಥ ಹನಮರ,ಅವರ ನೇತೃತ್ವದಲ್ಲಿ, ರೈತ ಬಂಧುಗಳು ನಮ್ಮ ರಕ್ತ ಸಹಿ ಅಭಿಯಾನಕ್ಕೆ ತಮ್ಮ ಅಮೂಲ್ಯ ರಕ್ತದಿಂದ ಸಹಿ ಮಾಡುವ ಮೂಲಕ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದರು.

ಈ ಸಮಾಜಮುಖಿ ಕಾರ್ಯದಲ್ಲಿ ಭಾಗವಹಿಸಿದ ಎಲ್ಲಾ ರೈತ ಬಂಧುಗಳಿಗೆ ಜೆನ್ ಜೆಡ್ ಅಭಿಯಾನದಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ನಾರಾಯಣ ಘಡಕೆ, ಶರಣಪ್ಪ ಕಂಬಡೊಳ್ಳಿ, ಪರಶುರಾಮ ಚೌಹಾಣ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

31/07/2026 01:08 pm

Cinque Terre

4.6 K

Cinque Terre

0

ಸಂಬಂಧಿತ ಸುದ್ದಿ