ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿಕಲಚೇತನ ಮಕ್ಕಳ ಜೊತೆ ಟೆನ್ನಿಸ್ ಆಡಿದ ಯು.ಟಿ. ಖಾದರ್ - ಸಚಿವರ ಸರಳತೆಗೆ ಮನಸೋತ ನೆಟ್ಟಿಗರು!

ಮಂಗಳೂರು : ಆರೋಗ್ಯ ಸಚಿವ ಯು. ಟಿ. ಖಾದರ್ ಅವರ ಸರಳತೆ ಮತ್ತು ಸಜ್ಜನಿಕೆ ಎಲ್ಲರಿಗೂ ತಿಳಿದಿರುವಂತದ್ದೇ. ಇದಕ್ಕೀಗ ಮತ್ತೊಂದು ಸುಂದರ ನಿದರ್ಶನ ಸಿಕ್ಕಿದೆ. ಇತ್ತೀಚೆಗೆ ಅವರು ವಿಕಲಚೇತನ ಮಕ್ಕಳೊಂದಿಗೆ ಟೆನ್ನಿಸ್ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ಸಚಿವರು ತಮ್ಮ ಬಿಡುವಿಲ್ಲದ ಕೆಲಸಗಳಲ್ಲಿ ಮುಳುಗಿರುತ್ತಾರೆ. ಆದರೆ, ತಮ್ಮ ಬ್ಯುಸಿ ಷೆಡ್ಯೂಲ್ ಮಧ್ಯೆಯೂ ಈ ವಿಶೇಷ ಮಕ್ಕಳೊಂದಿಗೆ ಸಮಯ ಕಳೆದು, ಅವರೊಂದಿಗೆ ಆಟವಾಡಿ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಮಕ್ಕಳ ಜೊತೆ ಒಂದಾಗಿ ಬೆರೆತ ಖಾದರ್ ಅವರ ಈ ನಡೆ ಪ್ರತಿಯೊಬ್ಬರ ಮನ ಗೆದ್ದಿದೆ. ಅಧಿಕಾರ, ಸ್ಥಾನಮಾನಗಳಿಗಿಂತ ಮಾನವೀಯತೆ ದೊಡ್ಡದು ಎಂಬುದನ್ನು ಅವರು ಮತ್ತೆ ಸಾಬೀತು ಮಾಡಿದ್ದಾರೆ. 'ಸರಳ ಸಜ್ಜನ ವ್ಯಕ್ತಿ' ಎಂದು ಅವರನ್ನು ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ..

Edited By :
PublicNext

PublicNext

22/07/2026 06:36 pm

Cinque Terre

19.5 K

Cinque Terre

0

ಸಂಬಂಧಿತ ಸುದ್ದಿ