ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಶಾಸಕರ ಡೆಲ್ಲಿ ಟೂರ್ ವಿಚಾರ – ಆರ್. ಅಶೋಕ್‌ಗೆ ಮಾಹಿತಿ ಕೊರತೆ ಎಂದ ಡಿಸಿಎಂ ಪರಮೇಶ್ವರ್

ಚಿಕ್ಕಬಳ್ಳಾಪುರ: ಶಾಸಕರು ದೆಹಲಿ ಪ್ರವಾಸ ಕೈಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಬಿಜೆಪಿ ನಾಯಕ ಆರ್. ಅಶೋಕ್ ಅವರ ಟೀಕೆಗೆ ತಿರುಗೇಟು ನೀಡಿದ್ದಾರೆ.

"ಆರ್. ಅಶೋಕ್ ಅವರಿಗೆ ಮಾಹಿತಿಯ ಕೊರತೆಯಿದೆ. ಮುಖ್ಯಮಂತ್ರಿ ಹಾಗೂ ನಾನು ಎಷ್ಟು ಸಭೆಗಳನ್ನು ನಡೆಸಿದ್ದೇವೆ ಎಂಬುದರ ಸಂಪೂರ್ಣ ಲೆಕ್ಕವಿದೆ. ನಾವು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೂ ಭೇಟಿ ನೀಡಿ ಸಭೆಗಳನ್ನು ನಡೆಸಿದ್ದೇವೆ" ಎಂದು ಹೇಳಿದರು.

"ಕಂದಾಯ ಸಚಿವರು ಹೋಗಬೇಕಿದ್ದ ಹಲವು ಸ್ಥಳಗಳಿಗೆ ಸ್ವತಃ ಮುಖ್ಯಮಂತ್ರಿಗಳೇ ಭೇಟಿ ನೀಡಿದ್ದಾರೆ. ನಾನು ತುಮಕೂರು, ಚಿತ್ರದುರ್ಗ ಹಾಗೂ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿದ್ದೇನೆ. ಆದ್ದರಿಂದ ಆರ್. ಅಶೋಕ್ ಅವರು ಮೊದಲು ಸಂಪೂರ್ಣ ಮಾಹಿತಿ ತಿಳಿದುಕೊಂಡು ಮಾತನಾಡಿದರೆ ಒಳ್ಳೆಯದು" ಎಂದು ಪರಮೇಶ್ವರ್ ತಿಳಿಸಿದರು.

- ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಚಿಕ್ಕಬಳ್ಳಾಪುರ

Edited By :
PublicNext

PublicNext

22/07/2026 08:14 pm

Cinque Terre

18.04 K

Cinque Terre

0

ಸಂಬಂಧಿತ ಸುದ್ದಿ