ತುಮಕೂರು: ರಸ್ತೆ ಬದಿ ದನ ಮೇಯಿಸುತ್ತಿದ್ದ ಮಹಿಳೆಯ ಕಣ್ಣಿಗೆ ಕಾರದ ಪುಡಿ ಎರಚಿ ಚಿನ್ನದ ಸರ ದೋಚಿರುವ ಘಟನೆ ಕೋರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬ್ರಹ್ಮಸಂದ್ರ ಗ್ರಾಮದಲ್ಲಿ ಈ ಕಳ್ಳತನ ನಡೆದಿದೆ. ನಾಗಮ್ಮ ಎಂಬ ಮಹಿಳೆ ರಸ್ತೆ ಬದಿ ದನ ಮೇಯಿಸುತ್ತಿದ್ದರು. ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು, ವಿಳಾಸ ಕೇಳುವ ನೆಪದಲ್ಲಿ ಹತ್ತಿರಕ್ಕೆ ಬಂದು ಮಹಿಳೆಯ ಕಣ್ಣಿಗೆ ಕಾರದ ಪುಡಿ ಎರಚಿ, ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.
Kshetra Samachara
22/07/2026 08:27 pm
LOADING...