ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರಲ್ಲಿ ಮತ್ತೆ ಹರಿದ ನೆತ್ತರು: ಗ್ಯಾಂಬ್ಲರ್, ಮಾಜಿ ರೌಡಿ ಶೀಟರ್ ಮಲ್ಲನ ಬರ್ಬರ ಹತ್ಯೆ.!

ತುಮಕೂರು: ತುಮಕೂರಿನಲ್ಲಿ ಮತ್ತೆ ನೆತ್ತರು ಹರಿದಿದೆ. ಮಾಜಿ ರೌಡಿ ಶೀಟರ್ ಹಾಗೂ ಗ್ಯಾಂಬ್ಲರ್‌ನನ್ನು ಅಮಾನುಷವಾಗಿ, ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ವೀರಣ್ಣ ಅಲಿಯಾಸ್ ಮಲ್ಲ ಎಂದು ಗುರುತಿಸಲಾಗಿದ್ದು, ಬೆಳಗೊಂಬ ತೋಟದ ಬಳಿ ವಾಸವಾಗಿದ್ದ ಎನ್ನಲಾಗಿದೆ. ಮನೆಯ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳ ಗುಂಪು ಆತನ ಮೇಲೆ ಏಕಾಏಕಿ ಹಲ್ಲೆ ಮಾಡಿ ಪರಾರಿಯಾಗಿದ್ದು, ಮಲ್ಲ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

2008ರಲ್ಲಿ ಮಲ್ಲನ ಮೇಲೆ ಪ್ರಕರಣ ದಾಖಲಾಗಿದ್ದು, ಆ ಪ್ರಕರಣದಲ್ಲಿ ಮಲ್ಲ ಖುಲಾಸೆಗೊಂಡಿದ್ದ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇಸ್ಪೀಟ್ ಗ್ಯಾಂಗ್ ಮೇಲೆ ನಡೆದ ದಾಳಿಯಲ್ಲಿಯೂ ಸಹ ಆತನ ಹೆಸರು ಕೇಳಿಬಂದಿತ್ತು. ಈತ ಬಿಜೆಪಿ ಪಕ್ಷದಲ್ಲಿಯೂ ಸಹ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಮತ್ತು ಕ್ಯಾತ್ಸಂದ್ರ ಪೊಲೀಸರು, ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ಯೆ ನಡೆದಿದೆ.

Edited By : Vijay Kumar
PublicNext

PublicNext

27/07/2026 08:32 am

Cinque Terre

9.74 K

Cinque Terre

0

ಸಂಬಂಧಿತ ಸುದ್ದಿ