ತುಮಕೂರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ 5ನೇ ವಾರ್ಡ್‌ನಲ್ಲಿ ಕುಡಿಯುವ ನೀರಿಲ್ಲದೆ ಜನರು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ಒಂದು ತಿಂಗಳಿಂದ ಈ ವಾರ್ಡ್‌ನಲ್ಲಿ ನಲ್ಲಿಗಳಿಗೆ ನೀರೇ ಬಂದಿಲ್ಲ. ಮನೆಯಲ್ಲಿ ಒಂದೇ ಒಂದು ಹನಿ ನೀರಿಲ್ಲ. ದಿನವಿಡೀ ಟ್ಯಾಂಕರ್ ಬರುವವರೆಗೆ ಕಾಯಬೇಕು.. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ ಅಂತ ಜನರು ಕಿಡಿಕಾರಿದ್ದಾರೆ. ವಾಟರ್‌ಮ್ಯಾನ್‌ಗೆ ದುಡ್ಡು ಕೊಟ್ಟರೂ ನೀರು ಬಿಡ್ತಿಲ್ಲ. ಮನೆಗೆ 50 ರಿಂದ 500 ರೂಪಾಯಿವರೆಗೆ ವಸೂಲಿ ಮಾಡ್ತಿದ್ದಾರೆ. ದುಡ್ಡು ಕೊಟ್ಟರೂ ಒಂದು ತೊಟ್ಟು ನೀರು ಸಿಗ್ತಿಲ್ಲ ಅಂತ ಆರೋಪಿಸಿದ್ದಾರೆ.. ಪ್ರತಿದಿನ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಬಂದಿದೆ. ಕೂಡಲೇ ಈ ಸಮಸ್ಯೆ ಬಗೆಹರಿಸಿ ಅಂತ ಜನರು ಒತ್ತಾಯ ಮಾಡ್ತಿದ್ದಾರೆ.
PublicNext
29/07/2026 03:45 pm
LOADING...