ಕೋಲಾರ - ತೀವ್ರ ಮಳೆ ಅಭಾವ ಹಾಗೂ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗದಂತೆ ಸರ್ಕಾರ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆ ಸಚಿವರಾದ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.
ಕೋಲಾರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಜರುಗಿದ ಬರ ಪರಿಹಾರ ಹಾಗೂ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಲಕ್ಷಾಮ ಹಾಗೂ ಬೆಳೆ ನಷ್ಟ ತೀವ್ರಗೊಳ್ಳದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜೂನ್ 1 ರಿಂದ ಜುಲೈ 21 ರವರೆಗೆ ಜಿಲ್ಲೆಯಲ್ಲಿ 114.8 mm ವಾಡಿಕೆ ಮಳೆಯಾಗಬೇಕಿದ್ದು, ಕೇವಲ 75.2 mm ಮಳೆಯಾಗಿದೆ (-34% ಕೊರತೆ). ವಿಶೇಷವಾಗಿ ಜುಲೈ 1 ರಿಂದ 21 ರ ಅವಧಿಯಲ್ಲಿ 49.3 mm ವಾಡಿಕೆ ಮಳೆಗೆ ಎದುರಾಗಿ ಕೇವಲ 9.0 mm ಮಳೆಯಾಗುವ ಮೂಲಕ ಬರೋಬ್ಬರಿ -82% ನಷ್ಟು ತೀವ್ರ ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದರು.
Kshetra Samachara
23/07/2026 02:58 pm
LOADING...