ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಮಗಾರಿಗಳಿಗೆ ಅನುದಾನ, ಹೊಸ ವಕೀಲರ ಭವನಕ್ಕೆ ಜಾಗ ಕಲ್ಪಿಸುವ ಭರವಸೆ : ಶಾಸಕ‌ ಕೊತ್ತೂರು ಮಂಜುನಾಥ್

ಕೋಲಾರ: ಜಿಲ್ಲಾ ವಕೀಲರ ಸಂಘದ ಕಚೇರಿಗೆ ಶಾಸಕ ಕೊತ್ತೂರು ಜಿ. ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ. ಎಲ್. ಅನಿಲ್ ಕುಮಾರ್ ಭೇಟಿ ನೀಡಿ, ವಕೀಲರ ಸಂಘದ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, "ಕೋರ್ಟ್ ಆವರಣದಲ್ಲಿ ₹10 ಲಕ್ಷ ವೆಚ್ಚದಲ್ಲಿ ಎರಡು ಹೈಮಾಸ್ಟ್ ಲೈಟ್‌ಗಳು, ₹5 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ₹5 ಲಕ್ಷ ವೆಚ್ಚದಲ್ಲಿ ಗ್ರಂಥಾಲಯಕ್ಕೆ ಅಗತ್ಯ ಪುಸ್ತಕಗಳ ಖರೀದಿ ಸೇರಿದಂತೆ ಒಟ್ಟು ₹20 ಲಕ್ಷ ಅನುದಾನವನ್ನು ನಾಳೆಯೇ ಬಿಡುಗಡೆ ಮಾಡಲಾಗುವುದು. ಸೂಕ್ತ ಜಾಗ ಗುರುತಿಸಿ ಕಾಮಗಾರಿ ಪ್ರಾರಂಭಿಸಿ" ಎಂದು ಸೂಚನೆ ನೀಡಿದರು.

"ಹೊಸ ವಕೀಲರ ಭವನ ನಿರ್ಮಾಣಕ್ಕೆ ಕೋರ್ಟ್ ಪಕ್ಕದಲ್ಲಿರುವ ತೋಟಗಾರಿಕೆ ಇಲಾಖೆಯ ಜಾಗವನ್ನು ಬಳಸಿಕೊಳ್ಳಲು ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ, ಜಾಗ ಮಂಜೂರು ಮಾಡಿಸಲಾಗುವುದು" ಎಂದು ಅವರು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

29/07/2026 01:52 pm

Cinque Terre

760

Cinque Terre

0

ಸಂಬಂಧಿತ ಸುದ್ದಿ