ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ವ್ಯಸನದಿಂದ ಇಡೀ ಕುಟುಂಬ ನಾಶ - ಪ್ರೊ.ಬಿ.ಕೆ.ರವಿ ಎಚ್ಚರಿಕೆ

ಕೋಲಾರ - ಯಾವುದೇ ಒಂದು ವ್ಯಸನವು ಕೇವಲ ವ್ಯಕ್ತಿಯನ್ನು ಬಲಿಪಡೆಯುವುದಿಲ್ಲ; ಬದಲಾಗಿ ಇಡೀ ಕುಟುಂಬ ಹಾಗೂ ಸಮಾಜವನ್ನೇ ನಾಶ ಮಾಡುತ್ತದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಎಚ್ಚರಿಕೆ ನೀಡಿದರು. ತಾಲ್ಲೂಕಿನ ಮಂಗಸಂದ್ರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸುವರ್ಣಗಂಗೆ ಆವರಣದಲ್ಲಿ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ 'ವ್ಯಸನಮುಕ್ತ ದಿನಾಚರಣೆ' ಉದ್ಘಾಟಿಸಿ ಅವರು ಮಾತನಾಡಿದರು, ಯುವಜನತೆ ಮಾದಕ ವ್ಯಸನಗಳಿಂದ ದೂರ ಉಳಿದು ಆರೋಗ್ಯಕರ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ದೇಶದಲ್ಲಿ ಶೇ 65ರಷ್ಟು ಯುವ ಜನಸಂಖ್ಯೆ ಇದ್ದು, ಈ ಯುವಶಕ್ತಿಯೇ ದೇಶದ ನಿಜವಾದ ಆಸ್ತಿ. ಆದ್ದರಿಂದ ಯುವಜನತೆ ಮಾದಕ ವಸ್ತುಗಳ ದಾಸರಾಗದೆ, ಸಮಾಜವನ್ನು ಮುನ್ನಡೆಸುವ ಮತ್ತು ದೇಶ ಕಟ್ಟುವ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

01/08/2026 05:05 pm

Cinque Terre

2.5 K

Cinque Terre

0

ಸಂಬಂಧಿತ ಸುದ್ದಿ