ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬರದ ನಾಡಿಗೆ ಮೊದಲು ಪರಿಹಾರ, ಬಳಿಕ ಕೆಡಿಪಿ ಸಭೆ - ಸಿಎಂಗೆ ರೈತರ ಮನವಿ

ಚಿತ್ರದುರ್ಗ: ಸಿಎಂ ಡಿ. ಕೆ ಶಿವಕುಮಾರ್ ಆಡಳಿತ ಯಂತ್ರಕ್ಕೆ ವೇಗ ನೀಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಬೆಂಗಳೂರು ವಿಭಾಗದ ೯ ಜಿಲ್ಲೆಗಳ ಕೆಡಿಪಿ ಸಭೆಗೆ ಸಿಎಂ ಡಿಕೆಶಿ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಚಿತ್ರದುರ್ಗ ನಗರದ ಅನುಭವ ಮಂಟಪದಲ್ಲಿ ಸಭೆ ಫಿಕ್ಸ್ ಮಾಡಿದ್ದು, ಜುಲೈ ೨೫ ರಂದು ಶನಿವಾರ ಸಭೆ ನಡೆಸಲು ತೀಮಾನಿಸಲಾಗಿದೆ.

ಕೆಡಿಪಿ ಸಭೆ ಹಿನ್ನೆಲೆ ಚಿತ್ರದುರ್ಗದ ಜಿಲ್ಲಾಡಳಿತ ಭರದ ತಯಾರಿ ನಡೆಸುತ್ತಿದೆ. ಈ ಮಧ್ಯೆ ಚಿತ್ರದುರ್ಗದಲ್ಲಿ ಬರ ಪೀಡಿತ ಜಿಲ್ಲೆಗೆ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಬಳಿಕ ಸಭೆ ನಡೆಸಬೇಕು ಎಂದು ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ. ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಮುಖಂಡರು ಚಿತ್ರದುರ್ಗ ಜಿಲ್ಲೆ ಶಾಶ್ವತ ಬರಪೀಡಿತ ನಾಡು ಅನ್ನೋ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಬಾರಿ ಕೂಡಾ ಮಳೆ ಕೈಕೊಟ್ಟು ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಈ ಕಾರಣಕ್ಕೆ ಚಿತ್ರದುರ್ಗದಲ್ಲೇ ಸಿಎಂ ಡಿಕೆ ಶಿವಕುಮಾರ್ ಕೆಡಿಪಿ ಸಭೆ ನಡೆಸುತ್ತಿದ್ದು, ಸಭೆಗೂ ಮುನ್ನವೇ ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ, ವಿಶೇಷ ಪ್ಯಾಕೇಜ್ ನೀಡುವಂತೆ ಹೋರಾಟಗಾರರು ಒತ್ತಾಯಿಸಿದ್ದಾರೆ.

ಇನ್ನೂ ಸಭೆಯಲ್ಲಿ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿ ಹಲವು ಬಯಲುಸೀಮೆ ಜಿಲ್ಲೆಗಳ ಅಧಿಕಾರಿಗಳು ಭಾಗಿಯಾಲಿದ್ದಾರೆ. ಇದೇ ಕಾರಣಕ್ಕೆ ಬಯಲುಸೀಮೆ ಜಿಲ್ಲೆಯ ಜನರ ಕನಸಿನ ಭದ್ರಾ ಮೇಲ್ದಂಡೆ ನೀರು ಹರಿಸುವಂತೆ ರೈತರು ಕೂಡಾ ಆಗ್ರಹಿಸಿದ್ದಾರೆ. ಹತ್ತಾರು ವರ್ಷಗಳಿಂದ ಭದ್ರಾ ನೀರು ಹರಿಯುತ್ತದೇ ಎಂದು ಆಡಳಿತ ಪಕ್ಷಗಳು ಭರವಸೆ ನೀಡಿದ್ದು, ಇದುವರೆಗೂ ಬರದ ಜಿಲ್ಲೆಗೆ ಭದ್ರೆ ಮಾತ್ರ ಹರಿದಿಲ್ಲ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭದ್ರೆ ನೀರು ಹರಿಸಿ, ಕೆಡಿಪಿ ಸಭೆ ನಡೆಸಬೇಕು, ಅಲ್ಲದೇ ಜಿಲ್ಲೆಯಲ್ಲಿ ಬರಗಾಲ ಆವರಸಿದ್ದು ಮೋಡ ಭಿತ್ತನೆಗೆ ಸರ್ಕಾರ ಮುಂದಾಗಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.

ವಾ.ಓ೩: ಒಟ್ಟಾರೇ ಬರದನಾಡಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಭಾಗದ ಮಟ್ಟದ ೯ ಜಿಲ್ಲೆಗಳ ಪ್ರಗತಿ ಪರಿಶೀಲನೆಗೆ ಮುಂದಾಗಿದ್ದು, ಇದು ಹಿರಿಯೂರು ಬೈ ಎಲೆಕ್ಷನ್ ಗಿಮಿಕ್ ಅನ್ನೋ ಚರ್ಚೆ ಕೂಡಾ ಆರಂಭವಾಗಿದೆ. ಈ ನಡುವೆ ಸಭೆಗೂ ಮುನ್ನವೇ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಿ ಜಿಲ್ಲೆಯ ಜನರಿಗೆ ಸಿಎಂ ಗಿಪ್ಟ್ ಕೊಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

Edited By :
PublicNext

PublicNext

24/07/2026 02:24 pm

Cinque Terre

11.34 K

Cinque Terre

0

ಸಂಬಂಧಿತ ಸುದ್ದಿ