ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ SIT ವರದಿ ಬಿಡುಗಡೆ ಮಾಡಲಿ: ಗಿರೀಶ್ ಮಟ್ಟಣ್ಣನವರ್ ಒತ್ತಾಯ

ಚಿತ್ರದುರ್ಗ: ಧರ್ಮಸ್ಥಳ ಬುರುಡೆ ಕೇಸ್ ದಿನಕ್ಕೋಂದು ತಿರುವು ಪಡೆದಿತ್ತು. ಬುರುಡೆ ಗ್ಯಾಂಗ್ ಆರೋಪವನ್ನ ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ ವಿಶೇಷ ತನಿಖೆ ನಡೆಸಿತ್ತು. ಈ ವೇಳೆ ಪ್ರಕರಣದ ಕಿಂಗ್ ಪಿನ್ ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧಿಸಿದ್ದ ಎಸ್‌ಐಟಿ ತನಿಖೆಗೆ ಒಳಪಡಿಸಿತ್ತು. ಈ ವೇಳೆ ಧರ್ಮಸ್ಥಳದಲ್ಲಿ ನಡೆದಿದ್ದ ಬುರುಡೆ ಕೇಸ್ ಶ್ರೀಕ್ಷೇತ್ರ ಧರ್ಮಸ್ಥಳ ಹೆಸರು ಕೆಡಿಸಲು ನಡೆಸಿದ್ದ ಷಡ್ಯಂತ್ರ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದ. ಈ ವೇಳೆ ಗಿರೀಶ್ ಮಟ್ಟಣ್ಣನವರ್, ಮಹೇಶ್ ತಿಮ್ಮರೂಡಿ, ಚಿತ್ರದುರ್ಗ ಮೂಲದ ರಮಾ ನಾಗರಾಜ್ ಹಾಗೂ ನಟ ಪ್ರಕಾಶ್ ರಾಜ್ ಸೇರಿ ಹಲವರು ೨೦೦ ಕೋಟಿಗೂ ಹೆಚ್ಚು ಫಂಡಿಂಗ್ ಮಾಡಿದ್ದರು ಎಂದು ಚಿನ್ನಯ್ಯ ಆರೋಪಿಸಿದ್ದ. ಬಳಿಕ ಪೊಲೀಸರು ಕೂಡಾ ನ್ಯಾಯಾಲಯಕ್ಕೆ ಚಿನ್ನಯ್ಯ ನೀಡಿದ್ದ ಸ್ಟೇಟ್‌ಮೆಂಟ್ ಸಲ್ಲಿಸಿದ್ರು. ಆದ್ರೆ ಇದೀಗ ಚಿನ್ನಯ್ಯ ಮಾಡಿದ್ದ ಆರೋಪ ಸುಳ್ಳು ಅನ್ನೋದು ಗೊತ್ತಾಗಿದೆ. ನ್ಯಾಯಾಲಯದಲ್ಲೇ ಚಿತ್ರದುರ್ಗ ಮೂಲದ ರಮಾನಾಗಾರಜ್ ಸೇರಿ ಹಲವರು ಆರೋಪ ಮುಕ್ತರಾಗಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ನಡೆಸಿರುವ ಸಾಮಾಜಿಕ ಕಾರ್ಯಕರ್ತೆ ರಮಾನಾರಾಜ್ ಕಾನೂನು ಪ್ರಕಾರವೇ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಯಾವುದೇ ಫಂಡಿಂಗ್ ಮಾಡಿಲ್ಲ, ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತೇವೆ. ಆದ್ರೆ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ಗುಡುಗಿದ್ದಾರೆ.

ವಾ.ಓ೨: ಇನ್ನೂ ಈ ನಡುವೆ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ರಾಜ್ಯ ಸರ್ಕಾರದ ನಡೆಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಂಗ್ಲೆ ಗುಡ್ಡದಲ್ಲಿ ಎಸ್‌ಐಟಿ ಅಧಿಕಾರಿಗಳಿಗೆ ಹತ್ತಾರೂ ಬುರುಡೆಗಳು ಸಿಕಿದ್ದು. ಅದ್ರಲ್ಲಿ ಮಹಿಳೆಯರ ಬುರಡೆಗಳೂ ಕೂಡಾ ಇದ್ದು, ಮಾಧ್ಯಮಗಳಲ್ಲಿ ಕೇವಲ ಪುರುಷರದ್ದು ಮಾತ್ರ ಎಂದು ಹೇಳುತ್ತಿದ್ದಾರೆ. ಆದ್ರೆ ಎಸ್‌ಐಟಿ ಅಧಿಕಾರಿಗಳಿಗೆ ಮಹಿಳೆಯರ ಕಳೆಬರ ಕೂಡಾ ಪತ್ತೆಯಾಗಿದ್ದು ಗೊತ್ತಾಗಿದೆ. ಇನ್ನೂ ಒಂದೇ ದಿನ ಐದಾರು ಹೆಣಗಳನ್ನ ದಪ್ಪನ್ ಮಾಡಿದ್ದು, ಕೂಡಾ ಹಲವು ಅನುಮಾನ ಮೂಡಿಸಿದೆ. ಈ ನಡುವೆ ಎಸ್‌ಐಟಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ಆದ್ರೆ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಮಾತ್ರ ಇದುವರೆಗೂ ಎಸ್‌ಐಟಿ ವರದಿಯನ್ನ ಮಾತ್ರ ಬಿಡುಗಡೆ ಮಾಡಿಲ್ಲ. ಕೂಡಲೇ ರಾಜ್ಯ ಸರ್ಕಾರ ವರದಿಯನ್ನ ಬಹಿರಂಗ ಮಾಡಬೇಕು. ಇಲ್ಲದೇ ಹೋದ್ರೆ ಸೌಜನ್ಯ ಪ್ರಕರಣವನ್ನ ದೆಹಲಿಯಲ್ಲಿ ಬೃಹತ್ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ರು

ವಾ.ಓ೩: ಒಟ್ಟಾರೇ ಧರ್ಮಸ್ಥಳ ಪ್ರಕರಣ ದಿನಕ್ಕೋಂದು ತಿರುವು ಪಡೆಯುತ್ತಿದ್ದು, ೨೦೦ ಕೋಟಿ ಫಂಡಿಂಗ್ ಮಾಡಿದ್ದಾರೆ ಅನ್ನೋ ಆರೋಪದಿಂದ ಬುರುಡೆ ಗ್ಯಾಂಗ್ ಮುಕ್ತವಾಗಿದೆ. ಪ್ರಕರಣದ ತನಿಖೆ ನಡೆಸಿದ್ದ STI ವರದಿ ಸಲ್ಲಿಕೆ ಮಾಡಿ 6 ತಿಂಗಳು ಕಳೆದರು ವರದಿ ಬಹಿರಂಗ ಪಡಿಸದೇ ಇರೋದು ಅನುಮಾನಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ SIT ವರದಿ ಬಿಡುಗಡೆ ಮಾಡುತ್ತಾ ಅಥವಾ ಮತ್ತೊಂದು ಹೋರಾಟಕ್ಕೆ ಇದೇ ವೇಧಿಕೆಯಾಗುತ್ತಾ ಕಾದು ನೋಡ್ಬೇಕಿದೆ....

Edited By : Somashekar
PublicNext

PublicNext

01/08/2026 11:26 pm

Cinque Terre

13.75 K

Cinque Terre

0

ಸಂಬಂಧಿತ ಸುದ್ದಿ