ಚಾಮರಾಜನಗರ : ಇನ್ನು ಎರಡು-ಮೂರು ದಿನಗಳಲ್ಲಿ ನೂತನ ಸಚಿವರ ಪಟ್ಟಿ ರೀಸಫ ಲ್ ಆಗಲಿದೆ ಎಂದು ಶಾಸಕ ಸಿ.ಪುಟ್ಟರಂ ಗಶೆಟ್ಟಿ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮಗಳೊಂ ದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡರಾದ ವೇಣುಗೋಪಾಲ್, ಸುರ್ಜೇವಾಲ, ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಅವರು ಸಭೆ ನಡೆಸಿ ಹೈಕಮಾಂಡ್ ಗೆ ವರದಿ ನೀಡಲಿದ್ದಾರೆ. ನಮ್ಮ ನಾಯಕರು ಸಭೆಯ ವರದಿಯನ್ನು ರಾಹುಲ್ ಗಾಂಧಿಗೆ ನೀಡಲಿದ್ದಾರೆ. ನಂತರ ನೂತನ ಸಚಿವರನ್ನು ಪ್ರಕಟಿಸುತ್ತಾರೆ ಎಂದರು.
ನಾನು ಒಬ್ಬ ಹಿರಿಯ ರಾಜಕಾರಣಿ. ನಾಲ್ಕು ಬಾರಿ ಚಾಮರಾಜನಗರ ಸಾಮಾನ್ಯ ಕ್ಷೇತ್ರದಿಂದ ಗೆದ್ದಿದ್ದೇನೆ. ಉಪ್ಪಾರ ಸಮುದಾಯದ ಏಕೈಕ ಶಾಸಕ ನಾನು. ಇವೆಲ್ಲವನ್ನು ಪರಿಗಣಿಸಿ ನನಗೆ ಸಚಿವ ಸ್ಥಾನ ಕೊಡಬಹುದು. ಸಚಿವ ಸ್ಥಾನ ಕೊಡುವುದು ನಮ್ಮ ನಾಯಕರಿಗೆ ಬಿಟ್ಟ ವಿಚಾರ ಎಂದರು.
ಸಚಿವ ಸಂಪುಟದಲ್ಲಿ ಜಾತಿವಾರು ಲೆಕ್ಕಾಚಾ ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಸಾಮಾಜಿಕ ನ್ಯಾಯ ಇದೆ. ಸಾಮಾಜಿಕ ನ್ಯಾಯದಡಿ ಎಲ್ಲ ಸಮುದಾ ಯಕ್ಕೂ ಸಚಿವ ಸ್ಥಾನ ಕೊಡುವ ಕೆಲಸವಾ ಗಲಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
Kshetra Samachara
24/07/2026 03:13 pm
LOADING...