ಚಾಮರಾಜನಗರ : ಅನುಕಂಪ ಗಿಟ್ಟಿಸೋದನ್ನು ಸಿದ್ದರಾಮಯ್ಯ ಅವರ ಹತ್ತಿರ ಕಲಿಯಬೇಕು ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಂದರು.
ಸಿದ್ದರಾಮಯ್ಯ ಚುನಾವಣೆಗೆ ನಿಲ್ಲುವುದಿಲ್ಲ ಎನ್ನುವ ವಿಚಾರಕ್ಕೆ ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ 2018ರಲ್ಲಿ ನಾನು ಚುನಾವಣೆಗೆ ನಿಲ್ಲೋದಿಲ್ಲ ಎಂದಿದ್ದರು. ಮೈಸೂರಲ್ಲಿ ಸೋಲುತ್ತೇನೆ ಎಂದು ಬಾದಾಮಿ ಕ್ಷೇತ್ರಕ್ಕೆ ಹೋದರು. ಬಾದಾಮಿಯಲ್ಲಿ ಅಷ್ಟೋ ಇಷ್ಟೋ ಓಟ್ ಪಡೆದು ಗೆದ್ದರು. ಮತ್ತೆ ಇನ್ನು ಯಾವತ್ತೂ ಚುನಾವಣೆಗೆ ನಿಲ್ಲಲ್ಲ ಎಂದರು. ಆದರೆ ಮತ್ತೆ 2023ರಲ್ಲಿ ಚುನಾವಣೆಗೆ ನಿಂತರು.
ಅವರು ಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳದೆ ಇದ್ದಿದ್ದರೆ ಗುಟ್ಟಾಗಿದ್ದಾರೆ ಎಂದು ಕೊಳ್ಳಬಹುದಾಗಿತ್ತು ಎಂದರು.
ಸಿದ್ದರಾಮಯ್ಯ ಅವರು ಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳಿದ್ದಾರೆ ಅಂದರೆ ಮತ್ತೆ ನಿಲ್ಲುತ್ತಾರೆ. ಈಗ ಅವರ ಮಾತಿಗೆ ಯಾವುದೇ ಬೆಲೆ ಇಲ್ಲ. ಈಗ ಸಿದ್ದರಾಮಯ್ಯ ಅವರಿಗೆ ಟಿಆರ್‌ಪಿ ಇಲ್ಲ ಎಂದರು.
PublicNext
30/07/2026 01:46 pm
LOADING...