ಗುಂಡ್ಲುಪೇಟೆ: ರೈತ ಹುತಾತ್ಮರ ದಿನಾಚರಣೆ ಹಾಗೂ ರಕ್ತದಾನ ಶಿಬಿರದ ಸಂದರ್ಭದಲ್ಲಿ ನಡೆದ ಘಟನೆಯನ್ನು ಖಂಡಿಸಿರುವ ಮಾಜಿ ಶಾಸಕ, ಬಿಜೆಪಿ ಚಾಮರಾಜನಗರ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್, ಪ್ರಶ್ನೆ ಕೇಳಿದ ರೈತರು ಹಾಗೂ ರೈತ ಮುಖಂಡರೊಂದಿಗೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ರೈತ ಸಂಘದ ವತಿಯಿಂದ ಆಯೋಜಿಸಿದ್ದ 46ನೇ ರೈತ ಹುತಾತ್ಮ ದಿನಾಚರಣೆ ಹಿನ್ನೆಲೆ ಸಮಸ್ಯೆಗಳನ್ನ ಆಲಿಸಲು ತೆರಳಿದ್ದ ಶಾಸಕರು ಏಕಾಏಕಿ ರೈತರ ವಿರುದ್ಧ ಮುಗಿಬಿದ್ದಿದ್ದು ಸರಿಯಲ್ಲ. ರೈತರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಬೇಕಿರುವ ಶಾಸಕರು ಉದ್ಧಟತನ ತೋರಿರುವುದು ಖಂಡನೀಯ. ಅಲ್ಲದೆ, ಶಾಸಕರ ಜತೆಗಿದ್ದ ಕಾರ್ಯಕರ್ತರು ರೈತರ ಮೇಲೆ ಹಲ್ಲೆಗೆ ಮುಂದಾಗಿದ್ದು ಗೂಂಡಾಗಿರಿಯ ಪರಮಾವಧಿಯಾಗಿದೆ. ಆದುದರಿಂದ ಈ ಕೂಡಲೇ ಶಾಸಕರ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
PublicNext
22/07/2026 05:20 pm
LOADING...